ಜೈಲಿಗೆ ಐಜಿ ಭೇಟಿ

Published on

ಬಳ್ಳಾರಿ : ನಗರ ಕೇಂದ್ರ ಕಾರಾಗೃಹಕ್ಕೆ ರಾಜ್ಯ ಅಂತರಿಕ ಭದ್ರತಾ ವಿಭಾಗದ ಐಜಿ ತ್ಯಾಗರಾಜನ್ ಶುಕ್ರವಾರ ಭೇಟಿ ನೀಡಿದರು. ಜೈಲಿನ ಹಲವು ಸೆಲ್‌ಗಳಿಗೆ ಭೇಟಿ ನೀಡಿ ಕೈದಿಗಳಿಗೆ ಸೌಕರ್ಯ ಹಾಗೂ ಭದ್ರತಾ ಬಗ್ಗೆ ಪರಿಶೀಲಿಸಿದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸೆಲ್‌ಗೆ ಟಿವಿ ಒದಗಿಸಿಲ್ಲ. ಈಗಾಗಲೇ ಟಿವಿ ಅಳವಡಿಸುವಂತೆ ದರ್ಶನ್ ಮನವಿ ಮಾಡಿದ್ದಾರೆ. ಆದರೆ, ಇನ್ನೂ ಟಿವಿ ರಿಪೇರಿಯಲ್ಲಿದ್ದು, ರೆಡಿಯಾದ ಮೇಲೆ ಟಿವಿ ಹಾಕಿಸಲಾಗುವುದು ಎಂದು ಜೈಲು ಅಧೀಕ್ಷಕಿ ಲತಾ ತಿಳಿಸಿದರು. ಇತ್ತೀಚೆಗೆ ಪರಪ್ಪನ ಆಗ್ರಹಾರದಲ್ಲಿ ದರ್ಶನ್‌ಗೆ ಅತಿಥ್ಯ ನೀಡಿದ ಹಿನ್ನಲೆ, ಇಲ್ಲಿ ಯಾವ ಸೌಕರ್ಯ ನೀಡಲಾಗಿದೆ ಎಂಬುದನ್ನು ಪರಿಶೀಲನೆಗೆ ಐಜಿ ಭೇಟಿ ನೀಡಿದ್ದಾರೆ ಎಂದು ಅಪ್ತ ಮೂಲಗಳು ತಿಳಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net