ಜೈನಾಪುರಲ್ಲಿ ರೆಸ್ಟಿ ಸ್ಪಾಟೆಡ್ ಕ್ಯಾಟ್ ಮರಿ ಪತ್ತೆ !

IMG-20201125-WA0108
Published on

ವಿಜಯಪುರ: ಕಬ್ಬಿನ ಹೊಲದಲ್ಲಿ ಪತ್ತೆಯಾದ ಮರಿಗಳ ಕಂಡು ಚಿರತೆ ಮರಿ ಎಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ !

ಬಬಲೇಶ್ವರ ಗ್ರಾಮದ ಜೈನಾಪುರ ಗ್ರಾಮದ ಪ್ರಶಾಂತ ದೇಸಾಯಿ ಎಂಬುವರ ಜಮೀನಿನಲ್ಲಿ ಮೂರು ಮರಿ ಪತ್ತೆಯಾಗಿದ್ದು ಜನ ಚಿರತೆ ಮರಿ ಎಂದು ಗಾಬರಿಗೊಂಡಿದ್ದಾರೆ. ಆದರೆ ಸದರಿ ಮರಿಗಳು ಚಿರತೆಯದ್ದಲ್ಲ ಬದಲಾಗಿ

ರೆಸ್ಟಿ ಸ್ಪಾಟೆಡ್ ಕ್ಯಾಟ್ ಗೆ ಹೋಲುತ್ತಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳ ಹಿಂದೆ ಇಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದವು. ಮೇ'ನಲ್ಲಿ ಇದೇ ಭಾಗದಲ್ಲಿ ಗಂಡು ಚಿರತೆ ಸೆರೆಯಾಗಿತ್ತು.

ಅರಣ್ಯ‌ ಇಲಾಖೆ ಇರಿಸಿದ್ದ ಬೋನಿಗೆ ಗಂಡು ಚಿರತೆ ಬಿದ್ದಿತ್ತು.

ಅದರ ಸಂಗಾತಿ‌ ಮರಿಗಳು ಎಂಬ ಸಂಶಯ ವ್ಯಕ್ತವಾಗಿದೆ. ಆದರೆ ಅರಣ್ಯ ಅಧಿಕಾರಿಗಳು ಮಾತ್ರ ಮರಿಗಳನ್ನು ರೆಸ್ಟಿ ಸ್ಪಾಟೆಡ್ ಕ್ಯಾಟ್ ಎಂದಿದ್ದು ಇನ್ನೂ ಪರಿಶೀಲನೆ ನಡೆಯುತ್ತಿದೆ ಎಂದಿದ್ದಾರೆ.

ಸದರಿ‌ ಮರಿಗಳನ್ನು ಸಿಕ್ಕ‌ಜಮೀನಿನಲ್ಲೇ ಬಿಡುವುದಾ? ಅಥವಾ ಸಂರಕ್ಷಿಸಿ ತರುವುದಾ? ಎಂಬ ಗೊಂದಲದಲ್ಲಿ ಅರಣ್ಯಾಧಿಕಾರಿಗಳಿದ್ದಾರೆ. ಜಮೀನಿನಲ್ಲಿ ಯೇ ಬಿಟ್ಟರೆ ತಾಯಿ ಬಂದು ಮರಿಗಳನ್ನು ಸಂರಕ್ಷಿಸಿ ಒಯ್ಯುವ ಸಾಧ್ಯತೆ ಇರುತ್ತದೆ ಎಂದು ವಲಯ ಅರಣ್ಯಾಧಿಕಾರಿ ಪ್ರಭಲಿಂಗ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net