

ಹಾಸನ : ಜಾರ್ಖಂಡ್ ರಾಜ್ಯದಲ್ಲಿನ ಗಿರಡಿ ಜಿಲ್ಲೆಯ ಮಧುವನ ಗ್ರಾಮದಲ್ಲಿನ ಜೈನರ ಪವಿತ್ರ ಸ್ಥಳ ಶಿಖರ್ಜಿಯನ್ನೂ ಪರ್ಯಟನಾ ಸ್ಥಳವಾಗಿ ಘೋಷಿಸಿರುವ ಕೇಂದ್ರ ಸರ್ಕಾರದ ಆದೇಶ ಖಂಡಿಸಿ ಗುರುವಾರ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜೈನ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜೈನ ಸಂಘದ ಕಾರ್ಯದರ್ಶಿ ಪ್ರಮೋದ್ ಮಾತನಾಡಿ, ಜೈನರ ಶಿಖರ್ಜಿಯನ್ನು ಪರ್ಯಟನಾ ಸ್ಥಳವಾಗಿ ಘೋಷಿಸದಂತೆ ಆಗ್ರಹ 24 ತೀರ್ಥಂಕರರ ಪೈಕಿ 20 ತೀರ್ಥಂಕರರು ಹಾಗೂ ಸಾವಿರಾರು ಮುನಿಗಳು ಸಾಧನೆ ಗೈದು ಕರ್ಮ ಕ್ಷಯ ಮಾಡಿ ಮುಕ್ತಿ ಪಡೆದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ತೀರ್ಥ ಕ್ಷೇತ್ರವನ್ನು ಪರ್ಯಟನಾ ಸ್ಥಳವಾಗಿ ಮಾಡಲು ಮುಂದಾಗಿರುವ ಸರ್ಕಾರದ ನಡೆ ಖಂಡನೀಯ ಇದರಿಂದ ಜೈನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಲಿದೆ ಎಂದು ಆರೋಪಿಸಿದರು.
ಶೀಖರ್ಜಿಯನ್ನು ಪರ್ಯಟನಾ ಸ್ಥಳವಾಗಿ ಮಾಡುವುದರಿಂದ ಜೈನ ಧರ್ಮದ ಆರಾಧ್ಯ ಸ್ಥಳ ತನ್ನ ಪವಿತ್ರತೆ ಕಳೆದುಕೊಳ್ಳಲಿದೆ, ಆದುದರಿಂದ ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಿ ಜೈನರ ಪವಿತ್ರ ಸ್ಥಳವನ್ನು ರಕ್ಷಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಜಿಲ್ಲಾಡಳಿತದ ಮೂಲಕ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಜೈನ ಸಂಘದ ಅಧ್ಯಕ್ಷ ಅಜಿತ್‌ಕುಮಾರ್, ಕಾರ್ಯದರ್ಶಿ ಬ್ರಹ್ಮೇಶ್, ರವೀಂದ್ರ ಕುಮಾರ್, ಶಾಂತಿ ಪ್ರಸಾದ್, ಪ್ರಕಾಶ್, ಮುಕ್ತೀಶ್ ಇತರರು ಇದ್ದರು.