ಜೈನಮುನಿ ಹತ್ಯೆಗೆ ಖಂಡನೆ

web3
ಜೈನಮುನಿ ಬರ್ಬರ ಹತ್ಯೆ ಖಂಡಿಸಿ ಸವದತ್ತಿ ನ್ಯಾಯವಾದಿಗಳ ಸಂಘದಿಂದ ಶಿರಸ್ತೆದಾರ ಶಶಿರಾಜ ವನಕೆಗೆ ಮನವಿ ಸಲ್ಲಿಸಲಾಯಿತು. ಎಂ.ಎನ್.ಮುತ್ತಿನ, ಮಲ್ಲಿಕಾರ್ಜುನ ಅಷ್ಟೆಕರ ಇತರರು ಇದ್ದರು.
Published on

ಸವದತ್ತಿ: ಜೈನಮುನಿ ಹತ್ಯೆ ಮತ್ತು ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಸವದತ್ತಿ ನ್ಯಾಯವಾದಿಗಳ ಸಂಘದಿಂದ ಶಿರಸ್ತೆದಾರ ಶಶಿರಾಜ ವನಕೆಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ವಕೀಲ ಸಂಘದ ಅಧ್ಯಕ್ಷ ಎಂ.ಎನ್.ಮುತ್ತಿನ ಮಾತನಾಡಿ, ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಆಚಾರ್ಯ ಕಾಮಕುಮಾರ ನಂದಿ ಜೈನ ಮುನಿ ಮಹಾರಾಜರನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಮುನಿಗಳಿಗೆ ಹಾಗೂ ಮಠಾಧೀಶರಿಗೆ ಭದ್ರತೆ ಇಲ್ಲದಂತಾಗಿದೆ. ಇದಲ್ಲದೆ ಹಳಿಯಾಳ ನ್ಯಾಯವಾದಿಗಳ ಸಂಘದ ವಕೀಲ ಹಾಗೂ ಅಧ್ಯಕ್ಷ ಮಲ್ಲಿಕಾರ್ಜುನ ಅಷ್ಟೆಕರ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಇಂತಹ ಕೃತ್ಯಗಳಿಂದ ನ್ಯಾಯವಾದಿಗಳಿಗೂ ಭದ್ರತೆ ಇಲ್ಲದಂತಾಗಿದೆ. ಆದ್ದರಿಂದ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ನ್ಯಾಯವಾದಿಗಳಿಗೆ ಸೂಕ್ತ ರಕ್ಷಣೆ ಒದಗಿಸಿ, ಶೀಘ್ರ ವಕೀಲರ ಅಧಿನಿಯಮ ಜಾರಿಗೊಳಿಸಬೇಕೆಂದರು.

ವಕೀಲರಾದ ಎಂ.ಎಫ್.ಬಡಿಗೇರ, ಸುನೀತಾ ಗೊಂದಕರ, ವಿವೇಕ ಮುನವಳ್ಳಿ, ಅರುಣ ಮಾನಗಾಂವ, ಎ.ಎಚ್. ನದಾಫ್, ರಾಘವೇಂದ್ರ ಪೂಜಾರ, ಎಂ.ಎಸ್. ಹುಬ್ಬಳ್ಳಿ, ಆರ್.ಎಸ್.ಆಲದಕಟ್ಟೆ, ದಿಲೀಪ ಜಮಾದಾರ, ಎಸ್.ಎಸ್.ಗಿರಿಜಣ್ಣವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net