ಜೈನ ಸಮುದಾಯಕ್ಕೆ ಅನ್ಯಾಯ

21Ainapur1
Published on

ಐನಾಪುರ: ಜೈನ ಧರ್ಮ ಶ್ರೇಷ್ಠ ಆಚಾರ-ವಿಚಾರವನ್ನು ಹೊಂದಿದೆ. ಅನೇಕ ರಾಜರು, ಶ್ರೇಷ್ಠ ಕವಿಗಳನ್ನು ನೀಡಿದ ಈ ಧರ್ಮಕ್ಕೆ ಅನ್ಯಾಯವಾಗುತ್ತಿದೆ. ಕಾರಣ ಜೂ. ೮ರಂದು ಬೃಹತ್ ಜೈನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರಸಂತ ಗುಣಧರನಂದಿ ಮುನಿ ಮಹಾರಾಜರು ಹೇಳಿದರು.

ಪಟ್ಟಣದ ಆದಿನಾಥ ಜೈನ ಮಂದಿರದ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷ ಹಾಗೂ ಜೈನ ಸಮುದಾಯಕ್ಕೆ ಅವಿನಾಭಾವ ಸಂಬಂಧವಿದೆ. ಕಾಂಗ್ರೆಸ್ ಪಕ್ಷಕ್ಕೆ ಚಿಹ್ನೆ ನೀಡಿದ್ದು ಜೈನ ಮುನಿಗಳು ಆದರೆ, ಈ ಸಮುದಾಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಅಲ್ಲದೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸರ್ಕಾರ ಶಿಕ್ಷಣ ಹಾಗೂ ಹಜ್ ಯಾತ್ರೆ, ಶಾದಿ ಮಹಲ್ ಅಂತಹ ಅನೇಕ ಯೋಜನೆಗಳಿಗೆ ಸರ್ಕಾರ ಕೋಟ್ಯಂತರ ರೂ. ಹಣ ನೀಡುತ್ತಿದೆ. ಆದರೆ, ಅದು ಜೈನ ಸಮುದಾಯಕ್ಕೆ ತಲುಪುತ್ತಿಲ್ಲ. ಇವುಗಳನ್ನು ಎದುರಿಸಲು ಎಲ್ಲ ಭಟ್ಟಾರಕರ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಜೈನ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ೧ ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜೈನ ಸಮುದಾಯ ಒಳಗೊಂಡ ಹಿಂದುಳಿದ ಸಮಾಜಗಳಿಗೆ ವಿದ್ಯಾರ್ಥಿ ವೇತನ ಕಡಿತಗೊಳಿಸಿದ ಕಾರಣ ಸರ್ಕಾರ ಉಚಿತ ಶಿಕ್ಷಣ ನೀಡಬೇಕು. ಇದಲ್ಲದೇ ಇನ್ನೂ ಹಲವಾರು ಬೇಡಿಕೆ ಈಡೇರಿಕೆ ಕುರಿತು ಜೂ ೮ರಂದು ರಾಜ್ಯಪಾಲ ಥಾವರಚಂದ ಗೆಹಲೋತ್ ಅಧ್ಯಕ್ಷತೆಯಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಜಿಲ್ಲೆಯ ಸಚಿವರು, ಜಿಲ್ಲಾ ಮಂತ್ರಿಗಳು ಪಾಲ್ಗೊಳ್ಳುವರು ಎಂದರು.

ಆದಿನಾಥ ದಿಗಂಬರ ಸಮುದಾಯದ ಪದಾಧಿಕಾರಿಗಳು ಜೈನ ಮುಖಂಡರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net