ಜೈನ ಸಮಾಜದಿಂದ ಶಿಕ್ಷಣಕ್ಕೆ ಒತ್ತು

15BRG1
ದಕ್ಷಿಣ ಭಾರತದ ಜೈನ ಸಭೆಗೆ 4ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ರಾವಸಾಹೇಬ ಪಾಟೀಲ ಅವರನ್ನು ಬೇಡಕಿಹಾಳ ಗ್ರಾಮದಲ್ಲಿ ಸಮಾಜದವರು ಸತ್ಕರಿಸಿದರು. ಉತ್ತಮ ಪಾಟೀಲ, ರವೀಂದ್ರ ಕುಲಕರ್ಣಿ, ಡಾ.ವಿಜಯ ಪಾಟೀಲ, ಬಾಳಾಸಾಹೇಬ ಪಾಟೀಲ ಇತರರಿದ್ದರು.
Published on

ಬೋರಗಾಂವ: ದಕ್ಷಿಣ ಭಾರತ ಜೈನ ಸಭಾ ಸಮಾಜ ಸುಧಾರಣೆ ಜತೆಗೆ ಆರೋಗ್ಯ, ಸಂಸ್ಕಾರ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂದು ದಕ್ಷಿಣ ಭಾರತದ ಜೈನ ಸಭಾ ಅಧ್ಯಕ್ಷ ರಾವಸಾಹೇಬ ಪಾಟೀಲ ಹೇಳಿದರು.

ಸಮೀಪದ ಬೇಡಕಿಹಾಳ ಗ್ರಾಮದ ಕುಸುಮಾವತಿ ಮಿರ್ಜಿ ಮಹಾವಿದ್ಯಾಲಯದಲ್ಲಿ ವೀರಾಚಾರ್ಯ ಸಂಸ್ಥೆ ಮತ್ತು ಸಮಸ್ತ ದಿಗಂಬರ ಜೈನ ಬಾಂಧವರಿಂದ ದಕ್ಷಿಣ ಭಾರತದ ಜೈನ ಸಭಾಕ್ಕೆ 4ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಪಾಟೀಲ ಅವರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸತ್ಕಾರ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ಜೈನ ಸಮಾಜದ ಜನಸಂಖ್ಯೆ ಕಡಿಮೆಯಿದ್ದು, ಸಮಾಜದವರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಕೇವಲ 30 ಲಕ್ಷ ರೂ. ಇದ್ದ ಶಿಷ್ಯ ವೇತನವನ್ನು ಇಂದು 3 ಕೋಟಿ ರೂ. ಇದ್ದು, ವರ್ಷಾಂತ್ಯಕ್ಕೆ 5 ಕೋಟಿ ರೂ.ಗೆ ಹೆಚ್ಚಿಸುವ ಸಂಕಲ್ಪವಿದೆ ಎಂದು ಹೇಳಿದರು.

ಸಾಹಿತ್ಯ, ಸಂಸ್ಕೃತಿ ಮತ್ತು ಕೃಷಿ ೌಂಡೇಶನ್ ಸಂಸ್ಥಾಪಕ ಪ್ರಕಾಶ ಪಾಟೀಲ, ಉತ್ತಮ ಪಾಟೀಲ, ರವೀಂದ್ರ ಕುಲಕರ್ಣಿ, ಡಾ.ವಿಜಯ ಪಾಟೀಲ, ಬಾಳಾಸಾಹೇಬ ಪಾಟೀಲ, ಪಾಸಗೌಡಾ ಪಾಟೀಲ, ಪದ್ಮಾಕರ ಪಾಟೀಲ, ಪ್ರಶಾಂತ ಪಾಟೀಲ ಡಾ. ಡಿ.ಎಸ್.ಬರಗಾಲೆ, ಡಾ. ವಿಜಯ ಪಾಟೀಲ, ಬಾಳಾಸಾಹೇಬ ಪಾಟೀಲ, ಸುಭಾಷ ಮಗದುಮ್ಮ, ಅಜಿತ ಭಂಡೆ, ಅಭಯ ಪಾಟೀಲ, ಸಿದ್ದಣ್ಣ ನಾಗನೂರೆ, ತಾತ್ಯಾಸಾಹೇಬ ಪಾಟೀಲ, ಆರ್.ಬಿ.ಖೋತ, ಬಾಳಾಸಾಹೇಬ ಮಗದುಮ್ಮ, ಆನಂದ ಉಗಾರೆ, ಡಾ. ರಾವಸಾಹೇಬ ಕುನ್ನುರೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net