ಜೈನ ಸಭಾ ಉದ್ಧಾರಕ್ಕೆ ನಿರಂತರ ಪ್ರಯತ್ನ

20Brg1
Published on

ಬೋರಗಾಂವ: ದಕ್ಷಿಣ ಭಾರತ ಜೈನ ಸಭಾ ಜೈನ ಸಮುದಾಯವನ್ನು ಒಗ್ಗೂಡಿಸಲು ಶ್ರಮಿಸುತ್ತಿದೆ. ಶ್ರಾವಕ ರತ್ನ ರಾವಸಾಹೇಬ ಪಾಟೀಲ ಈ ಸಭೆಗೆ ನಿಜವಾಗಿಯೂ ಶಕ್ತಿ ತುಂಬಿದ್ದರಿಂದ ದೇಶಾದ್ಯಂತ ಖ್ಯಾತಿ ಪಡೆಯಿತು ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.

ಹಾರೂಗೇರಿ ಪಟ್ಟಣದ ಆದಿನಾಥ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಕ್ಷಿಣ ಭಾರತ ಜೈನ ಸಭೆಯ ಎರಡು ದಿನಗಳ ೧೦೩ನೇ ತ್ರೈಮಾಸಿಕ ಅಧಿವೇಶನದಲ್ಲಿ ಮಾತನಾಡಿದರು. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅನೇಕ ಸ್ಥಳಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಹಾಸ್ಟೆಲ್, ಶಾಲೆ, ಕಾಲೇಜು, ಸಮುದಾಯ ಭವನ ಮುಂತಾದ ವಿವಿಧ ಕಾರ್ಯಗಳನ್ನು ಕೈಗೊಳ್ಳಲಾಯಿತು. ಸಮುದಾಯದ ಪ್ರಗತಿಗಾಗಿ ಎಲ್ಲರೂ ಒಗ್ಗೂಡಿ ಮುನ್ನಡೆಯೋಣ ಎಂದು ಕರೆ ನೀಡಿದರು.

ನೂತನ ಅಧ್ಯಕ್ಷ ಬಾಲಚಂದ್ರ ಪಾಟೀಲ ಮಾತನಾಡಿ, ರಾವಸಾಹೇಬ ಪಾಟೀಲರ ಆಶೀರ್ವಾದದಿಂದಾಗಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಅವರ ಆದರ್ಶ ಮನಸ್ಸಿನಲ್ಲಿಟ್ಟುಕೊಂಡು, ಸಭೆಗಾಗಿ ಕೆಲಸ ಮಾಡುತ್ತೇನೆ ಎಂದರು.

ರಾವಸಾಹೇಬ ಪಾಟೀಲ (ದಾದಾ) ನಗರವನ್ನು ಪಾರಿಸ ಉಗಾರೆ ಉದ್ಘಾಟಿಸಿದರು. ನಾಂದಣಿಯ ಜನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮತ್ತು ಕೊಲ್ಲಾಪುರ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಡಿ.ಸಿ. ಸದಲಗೆ, ಜಿನ್ನಪ್ಪ ಅಸ್ಕಿ, ಇರಗೌಡ ಪಾಟೀಲ, ಶಾಸಕರಾದ ಗಣೇಶ ಹುಕ್ಕೇರಿ, ರಾಜೇಂದ್ರ ಪಾಟೀಲ, ಶಾಸಕ ಮಹೇಶ ತಮ್ಮಣ್ಣವರ, ಮುಖಂಡರಾದ ಅಭಿನಂದನ ಪಾಟೀಲ, ಚೇರ್ಮನ ರಾವಸಾಹೇಬ ಪಾಟೀಲ, ದತ್ತಾ ಡೋರ್ಲೆ, ಮೀನಾಕ್ಷಿ ಪಾಟೀಲ, ಸ್ವರೂಪಾ ಪಾಟೀಲ, ಡಾ. ಅಜಿತ ಪಾಟೀಲ, ಧೂಳೇಗೌಡ ಪಾಟೀಲ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ, ಸೇರಿ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net