ಜೈಘೋಷಗಳ ಮಧ್ಯೆ ಅದ್ದೂರಿ ರಥೋತ್ಸವ

29-07KKR-03
Published on

ಕಕ್ಕೇರಾ: ಪಟ್ಟಣದ ಶ್ರೀ ಕರಿಯಪ್ಪ ತಾತನ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಲಕ್ಷಾಂತರ ಭಕ್ತರ ಜೈಘೋಷಗಳ ಮಧ್ಯೆ ಸಂಭ್ರಮದ ಹೂವಿನ ರಥೋತ್ಸವ ಜರುಗಿತು.

ಸಂಜೆ ೬.೨೧ರ ಸುಮಾರಿಗೆ ವಿವಿಧ ಪುಷ್ಟಲಂಕಾರಗೊAಡ ರಥಕ್ಕೆ ಪೂಜ್ಯ ನಂದಣ್ಣಪ್ಪ ಪೂಜಾರಿ ಪೂಜೆ ಸಲ್ಲಿಸಿ, ರಥೋತ್ಸವದ ಸುತ್ತ ಕಳಸದೊಂದಿಗೆ ಐದು ಸುತ್ತು ಪ್ರದಕ್ಷಿಣೆ ಹಾಕಿ, ರಥದ ಮೇಲೆ ಕಳಸವನ್ನಿರಿಸುತ್ತಿದ್ದಂತೆ ನೆರೆದ ಭಕ್ತ ಸಮೂಹ ಚಪ್ಪಾಳೆ ತಟ್ಟಿ ಖುಷಿ ವ್ಯಕ್ತಪಡಿಸಿದರು.

ನಂತರ ಪೂಜ್ಯದ್ವಯರಾದ ಅಯ್ಯಣ್ಣ ಪೂಜಾರಿ, ಪರಮಣ್ಣ ಪೂಜಾರಿ ಅವರು ರಥದ ಮೇಲೆ ಏರಿ ಭಕ್ತರತ್ತ ಬಿಳಿ ವಸ್ತç ಬೀಸಿ ರಥ ಎಳೆಯುವುದಕ್ಕೆ ಚಾಲನೆ ನೀಡುತ್ತಿದ್ದಂತೆ ಸಂಗಮೇಶ್ವರ ಮಹಾರಾಜಕೀ ಜೈ, ಕರಿಯಪ್ಪ ತಾತನವರ ಮಹಾರಾಜಕೀ ಜೈ ಮತ್ತು ರಾಮಯ್ಯತಾತನವರ ಮಹಾರಾಜಕೀ ಜೈ ಎಂಬ ಭಕ್ತರ ಜೈಘೋಷಗಳು ಮುಗಿಲು ಮುಟ್ಟಿತು. ರಥೋತ್ಸವದತ್ತ ಹೂ, ಉತ್ತತ್ತಿ, ಬಾಳೆಹಣ್ಣು ಎಸೆದು ಕರಿಯಪ್ಪ ತಾತನವರ ಕೃಪೆಗೆ ಭಕ್ತರ ಪಾತ್ರರಾದರು. ರಥೋತ್ಸವ ಪಾದಕಟ್ಟೆ ತಲುಪಿ ಸುರಕ್ಷಿತವಾಗಿ ಸ್ವಸ್ಥಳಕ್ಕೆ ಬಂದು ತಲುಪಿತು.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭಕ್ತರು ದೀರ್ಘದಂಡ ನಮಸ್ಕಾರ ಸಲ್ಲಿಸಿ, ಕರಿಯಪ್ಪ ತಾತಾ, ಸಂಗಮೇಶ್ವರ ಗದ್ದುಗೆಗೆ, ರಾಮಯ್ಯತಾತನ ಗದ್ದುಗೆಗೆ ಕಾಯಿ, ಕರ್ಪೂರ ಸಲ್ಲಿಸಿದರು. ನಾಗಮೂರ್ತಿಗೆ ಪುರುಷರು, ಮಹಿಳೆಯರು ಹಾಗೂ ಚಿಕ್ಕಮಕ್ಕಳು ನಾಗಮೂರ್ತಿಗೆ ಹಾಲೆರೆದು ತಮ್ಮ ಭಕ್ತಿಯ ಪರಾಕಾಷ್ಠೆ ಸಲ್ಲಿಸಿದರು.

ನಾಗಪಂಚಮಿಯAದು ಶ್ರೀಮಠದ ನಾಗದೇವರ ದಾರ ಧರಿಸುವುದರಿಂದ ಸರ್ಪದೋಷದಿಂದ ಮುಕ್ತಿಯಾಗುವ ಪ್ರತೀತಿ ಹಿನ್ನೆಲೆಯಲ್ಲಿ ಭಕ್ತರು ತಮ್ಮ ಭಕ್ತಿ ಕಾಣಿಕೆ ಸಲ್ಲಿಸಿ ನಾಗದೇವರ ದಾರ ಪಡೆದು ತಮ್ಮ ಕೈಗಳಿಗೆ ಕಟ್ಟಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೂ ಡೊಳ್ಳಿನ ಕಲಾವಿದರು ಡೊಳ್ಳಿನ ಪದಗಳನ್ನು ಹಾಡಿ ನೆರೆದ ಭಕ್ತರನ್ನು ರಂಜಿಸಿದರು. ಸೋಮವಾರ ರಾತ್ರಿ ವಿವಿಧ ಭಜನಾ ತಂಡಗಳಿAದ ಅಹೋರಾತ್ರಿ ಭಜನಾ ಕರ‍್ಯಕ್ರಮಗಳು ಜರುಗಿದವು.

ಪೂಜ್ಯ ನಂದಣ್ಣಪ್ಪ ಪೂಜಾರಿ, ಹನುಮಂತರಾಯ ಜಹಾಗೀರದಾರ, ಅಯ್ಯಣ್ಣ ಪೂಜಾರಿ, ಪರಮಣ್ಣ ಪೂಜಾರಿ, ಮಾನಯ್ಯ ಪೂಜಾರಿ, ಸಂಗಯ್ಯಸ್ವಾಮಿ, ಪುರಸಭೆ ಅಧ್ಯಕ್ಷ ಸಣ್ಣಅಯ್ಯಾಳಪ್ಪ ಬಡಿಗೇರ, ಉಪಾಧ್ಯಕ್ಷ ದೇವಿಂದ್ರ ದೇಸಾಯಿ, ಗುಂಡಪ್ಪ ಸೊಲಾಪುರ, ರಾಜು ಹವಾಲ್ದಾರ್, ಸಿದ್ದಣ್ಣನಾಯಕ ದೇಸಾಯಿ, ದೇವಿಂದ್ರಪ್ಪ ಬಳಿಚಕ್ರ, ರಮೇಶಶೆಟ್ಟಿ, ಪರಮಾತ್ಮ ಗುರಿಕಾರ, ಗುಡದಪ್ಪ ಕುರಿ, ನಂದಣ್ಣ ಬಾಕ್ಲಿ, ಯಮುನಪ್ಪ ಹರ್ನಾಳ್, ಪರಮಣ್ಣ ಗುತ್ತೇದಾರ, ಷಣ್ಮುಖಪ್ಪ ದೊರೆ, ಗೌಡಪ್ಪ ಬೊಮ್ಮನಳ್ಳಿ, ಶೇಕಪ್ಪ ಕಾಳಗಿ, ಬಸಣ್ಣ ಕುಂಬಾರ, ಪುರಸಭೆ ಸದಸ್ಯರುಗಳು, ವಿವಿಧ ಸಂಘಟನೆ ಪದಾಧಿಕಾರಿಗಳು ಸೇರಿದಂತೆ ಸಹಸ್ರಾರು ಭಕ್ತವೃಂದ ವಿವಿಧ ಗ್ರಾಮಗಳಿಂದ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

ಮುನ್ನೆಚ್ಚರಿಕೆ ಕ್ರಮವಾಗಿ ಕೊಡೇಕಲ್ ಪಿಎಸ್‌ಐ ಅಯ್ಯಪ್ಪ ನೇತೃತ್ವದಲ್ಲಿ ವಾಲ್ಮೀಕಿ, ಕನಕದಾಸ, ಅಂಬೇಡ್ಮರ ವೃತ್ತಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಅದ್ದೂರಿ ರಥೋತ್ಸವಕ್ಕೆ ಅಪಾರ ಜನಸ್ತೋಮ ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net