

ಅರಕಲಗೂಡು: ಸಂವಿಧಾನ ಸಂರಕ್ಷಣೆಗಾಗಿ ಬಿಎಸ್‌ಪಿ ವತಿಯಿಂದ ಶುಕ್ರವಾರ ಜೈಭೀಮ್ ಜಾನಜಾಗೃತಿ ಜಾಥಾ ನಡೆಸಲಾಯಿತು.
ಗೊರೂರಿನಲ್ಲಿ ಪಕ್ಷದ ಅಪಾರ ಕಾರ್ಯಕರ್ತರು ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಅತ್ನಿ ನೇತೃತ್ವದಲ್ಲಿ ಜಾಥಾಕ್ಕೆ ಭವ್ಯ ಸ್ವಾಗತ ಕೋರಿದರು. ನಂತರ ಅನಕೃ ವೃತ್ತದ ಮಾರ್ಗವಾಗಿ ಜಾಥಾ ಸಾಗಿತು.
ಬಿಎಸ್‌ಪಿ ರಾಜ್ಯ ಸಂಯೋಜಕ ಗೋಪಿನಾಥ್ ಮಾತನಾಡಿ, ದೇಶದಲ್ಲಿ ಇದುವರೆಗೆ ಆಳ್ವಿಕೆ ನಡೆಸಿದ ಸರ್ಕಾರಗಳು ಸಂವಿಧಾನ ವಿರೋಧಿಯಾಗಿ ಆಡಳಿತ ನಡೆಸಿ ಜನಸಾಮಾನ್ಯರಿಗೆ ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಿವೆ. ಉಚಿತವಾಗಿ ಶಿಕ್ಷಣ ನೀಡಬೇಕೆಂದು ಸಂವಿಧಾನ ಹೇಳಿದರೆ, ಅದಕ್ಕೆ ವಿರುದ್ಧವಾಗಿ ಹಣ ನೀಡಿದರೆ ವಿದ್ಯೆ ಎಂದು ಬ್ಯುಸಿನೆಸ್ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಹೊಸ ಶಿಕ್ಷಣ ನೀತಿ ಜಾರಿಗೆ ತಂದು ಕೋಟ್ಯಂತರ ರೂ ನೀಡಿದರೆ ಮಾತ್ರ ವೈದ್ಯರು, ಇಂಜಿನಿಯರ್ ಆಗಬಹುದು ಎಂಬ ಕಾಯಿದೆ ತರುತ್ತಿದ್ದಾರೆ. ಕಾರ್ಪೊರೇಟ್ ಕೈಗೆ ಶಿಕ್ಷಣ ನೀಡಲಾಗಿದೆ. ಎಂಬಿಬಿಎಸ್ ವ್ಯಾಸಂಗ ಮಾಡಲು ಕೋಟಿ ರೂ ನೀಡಿರುತ್ತಾರೆ. ವೃತ್ತಿಗೆ ಬಂದ ಬಳಿಕ ಅವರಿಗೆ ಹಣ ಮಾಡುವ ಕಡೆಗೆ ಹೆಚ್ಚಿನ ಗಮನವಿರುತ್ತದೆ ಹೊರತು ರೋಗಿಯ ಪ್ರಾಣ ಉಳಿಸುವ ಕೆಡೆಗೆ ಇರುವುದಿಲ್ಲ. ಭ್ರ?್ಟಾನಾಗುತ್ತಾರೆ. ಇಂತ ದುರಾವಸ್ಥೆಗೆ ಆಳುವ ಸರ್ಕಾರಗಳ ಸಂವಿಧಾನ ವಿರೋಧಿ ನೀತಿಯೇ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಕೂಡ ನಡೆದಿದೆ. ಜನರ ಅರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದ್ದ ಅರೋಗ್ಯ ಸಚಿವರು ಇದ್ದ ಆಸ್ಪತ್ರೆಗಳನ್ನು ಮುಚ್ಚಿ ಗಲ್ಲಿ ಗಲ್ಲಿಗೆ ಖಾಸಗಿ ಆಸ್ಪತ್ರೆಗಳನ್ನು ತೆರೆಸಿ ಬ್ಯುಸಿನೆಸ್ ದಂದೆಗೆ ಪ್ರೋತ್ಸಾಹಿಸಿದ್ದಾರೆ ಎಂದು ಆರೋಪಿಸಿದರು.
ಸಂವಿಧಾನ ಸಕಲ ಭಾರತೀಯರಿಗೂ ಪವಿತ್ರ ಗ್ರಂಥವಾಗಿದ್ದು, ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಲಿದೆ. ಹಾಗಾಗಿ ನಿಮ್ಮ ಹಕ್ಕು, ಕರ್ತವ್ಯದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದರು.
ಬಿಎಸ್‌ಪಿ ರಾಷ್ಟ್ರೀಯ ನಾಯಕ ನಿತಿನ್ ಸಿಂಗ್, ಸಂಯೋಜಕ ದಿನೇಶ್ ಗೌತಮ್, ರಾಜ್ಯಾಧ್ಯಕ್ಷ ಕೃ?್ಣಮೂರ್ತಿ, ಅನಿಲ್ ಕುಮಾರ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಅತ್ನಿ ಇತರರಿದ್ದರು.