ಜೇಸಿ ಸಂಸ್ಥೆಗೆ ಗೋಲ್ಡನ್ ಕಾಲರ್ ಪ್ರಶಸ್ತಿ

Somavarapete JCI
ಸೋಮವಾರಪೇಟೆ ಜೆಸಿಐ ಸಂಸ್ಥೆಗೆ ಗೋಲ್ಡನ್ ಕಾಲರ್ ಪ್ರೆಸಿಡೆಂಟ್ ಅವಾರ್ಡ್ ಲಭಿಸಿದ್ದು, ಸಂಸ್ಥೆಯ ಅಧ್ಯಕ್ಷೆ ರುಬಿನ ಪ್ರಶಸ್ತಿ ಸ್ವೀಕರಿಸಿದರು. ಯಶಸ್ವಿನಿ, ಪ್ರಶಾಂತ್, ಎ.ಆರ್.ಮಮತಾ, ಮಾಯಾ ಗಿರೀಶ್ ಇದ್ದರು.
Published on

ಸೋಮವಾರಪೇಟೆ: ಅನುಬಂಧ ಸ್ನೇಹ ಸಂಬಂಧಗಳ ದರ್ಶನ ಶೀರ್ಷಿಕೆಯಡಿ ಬೀರೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜೆಸಿಐ ವಲಯ 14 ಅರ್ಧವಾರ್ಷಿಕ ಸಮ್ಮೇಳನ-2023 ರಲ್ಲಿ ಗೋಲ್ಡನ್ ಕಾಲರ್ ಪ್ರೆಸಿಡೆಂಟ್ ಅವಾರ್ಡ್ ಸೋಮವಾರಪೇಟೆ ಜೇಸಿ ಸಂಸ್ಥೆಗೆ ಲಭಿಸಿದೆ.

ಆರು ತಿಂಗಳಲ್ಲಿ ವಲಯ ಮತ್ತು ಜೆಸಿಐ ಭಾರತ ನೀಡುವ ಮಾರ್ಗದರ್ಶನದಂತೆ ಘಟಕಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದು, ಅದರಲ್ಲಿ ಸಾಧನೆಗೈದ ಘಟಕವನ್ನು ಗುರುತಿಸಿ ಅರ್ಧವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.

ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಅಧ್ಯಕ್ಷೆ ಎಂ.ಎ.ರುಬೀನಾ ಅವರಿಗೆ ವಲಯ ಅಧ್ಯಕ್ಷರಾದ ಯಶಸ್ವಿನಿ ಹಾಗೂ ವಲಯ ಉಪಾಧ್ಯಕ್ಷ ಎಚ್.ಆರ್.ಪ್ರಶಾಂತ್ ಪ್ರಶಸ್ತಿ ಪ್ರದಾನ ಮಾಡಿದರು. ಔಟ್ ಸ್ಟ್ಯಾಂಡಿಂಗ್ ಲಾಮ್ ವಿನ್ನರ್, ಉತ್ತಮ ಸ್ಪರ್ಧಿ, ಪಿ ಆರ್ ಆಂಡ್ ಮಾರ್ಕೆಟಿಂಗ್, ನೀಡ್ ಬ್ಲಡ್ ಕಾಲ್, ಗೋ ಗ್ರೀನ್, ಮ್ಯಾನೇಜ್‌ಮೆಂಟ್ ಏರಿಯ, ಪ್ರೋಗ್ರಾಂ ಏರಿಯ ಮತ್ತು ಗೋ ಗ್ರೀನ್ ನಲ್ಲಿ ರನ್ನರ್ ಅಪ್ ಪ್ರಶಸ್ತಿಗಳು ಸೋಮವಾರಪೇಟೆ ಜೇಸಿಗೆ ಲಭಿಸಿವೆ.

ಪ್ರಶಸ್ತಿ ಸ್ವೀಕರಿಸುವ ಸಂದರ್ಭ ಜೆಸಿಐ ಸಂಸ್ಥೆಯ ಪದಾಧಿಕಾರಿಗಳಾದ ಎ.ಆರ್.ಮಮತ, ಕೆ.ಎ. ಪ್ರಕಾಶ್, ಮಾಯಾಗಿರೀಶ್, ಕಾರ್ಯದರ್ಶಿ ಜಗದಾಂಬ, ಜಿತೇಶ್, ದಿಶಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net