ಜೇವರ್ಗಿಯಲ್ಲಿ ಶ್ರೀ ಮಹಾಲಕ್ಷ್ಮೀ ವೈಭವ

WhatsApp Image 2023-07-14 at 7.32.11 PM
ಜೇವರ್ಗಿ ಹೊರವಲಯದ ಆಯಿತಳದಲ್ಲಿ ವನ ಬೋಜನ ಸವಿಯುತ್ತಿರುವ ಭಕ್ತರು.
Published on

ಜೇವರ್ಗಿ: ಹೊರವಲಯದ ಆಯಿ ತಳ (ಶ್ರೀ ಮಹಾಲಕ್ಷಿö್ಮÃ ದೇವಿ ಮೂಲ ಸ್ಥಳ)ದಲ್ಲಿ ಅಪಾರ ಭಕ್ತರ ಮಧ್ಯೆ ಸಂಭ್ರಮದಿಂದ ಶ್ರೀ ಮಹಾಲಕ್ಷ್ಮೀ ಪರ್ವ ಶುಕ್ರವಾರ ನೆರವೇರಿತು.

ನಸುಕಿನ ಜಾವ ದೇವಿಯ ಮೂರ್ತಿಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಭಕ್ತರು ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿ, ಮನೆಯಿಂದ ತಂದಿದ್ದ ಹೋಳಿಗೆ ಸೇರಿ ಇನ್ನಿತರ ಖಾದ್ಯವನ್ನು ನೈವೇದ್ಯ ಅರ್ಪಿಸಿದರು. ಇನ್ನು ಕೆಲವರು ದೇವಿಗೆ ಸೀರಿ ಉಡಿಸಿ, ಟೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ಬೆಳಗ್ಗೆಯಿಂದಲೇ ಅಪಾರ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು.

ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ನಿಂದ ಭಕ್ತರಿಗೆ ಕುಡಿಯುವ ನೀರು ಸೇರಿ ಅಗತ್ಯ ಸೌಕರ್ಯ ಕಲ್ಪಿಸಲಾಗಿತ್ತು. ದೇವಸ್ಥಾನದ ಪರಿಸರದಲ್ಲಿಯೇ ಮನೆಯಿಂದ ತಂದ ಹೋಳಿಗೆ, ಕರಿಗಡುಬು, ತುಪ್ಪ, ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಧಪಾಟಿ, ಬೇರಕಿ ರೊಟ್ಟಿ ಸೇರಿ ಇನ್ನಿತರ ಆಹಾರವನ್ನು ಕುಟುಂಬದೊAದಿಗೆ ಸವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net