ಜೇವರ್ಗಿಯಲ್ಲಿ ಮುತಾಲಿಕ್ ಸೇರಿ ನಾಲ್ವರ ಭಾಷಣಕ್ಕೆ ನಿರ್ಬಂಧ

pramod-mutalik-320
Published on

ಕಲಬುರಗಿ: ಶ್ರೀರಾಮ ಸೇನೆಯಿಂದ ಜೇವರ್ಗಿ ಪಟ್ಟಣದ ಅಖಂಡೇಶ್ವರ ಎಪಿಎಂಸಿ ಯಾರ್ಡ್ ಮತ್ತು ಗಣೇಶ ಚೌಕ್‌ನಲ್ಲಿ ಪ್ರತ್ಯೇಕವಾಗಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ವಿಸರ್ಜನೆ ಬುಧವಾರ ನಡೆಯಲಿದ್ದು, ಈ ವೇಳೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿ ನಾಲ್ವರ ಭಾಷಣ ನಿರ್ಬಂಧಿಸಿ ಡಿಸಿ ಯಶವಂತ ಗುರುಕರ್ ಆದೇಶಿಸಿದ್ದಾರೆ. ಮಂಗಳವಾರ ಬೆಳಗ್ಗೆ ೬ರಿಂದ ಬುಧವಾರ ಮಧ್ಯರಾತ್ರಿ ೧೨ರವರೆಗೆ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಹಾರಿಕಾ ಮಂಜುನಾಥ, ಕಾಳಿ ಸ್ವಾಮೀಜಿ ಅವರು ಸಾರ್ವಜನಿಕವಾಗಿ ಭಾಷಣ ಮಾಡದಂತೆ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net