ಜೇವರ್ಗಿಯಲ್ಲಿ ಎತ್ತಿನ ಬಂಡಿ, ಟ್ರ್ಯಾಕ್ಟರ್‌ನೊಂದಿಗೆ ಹೋರಾಟ

PH 08
Published on

ಜೇವರ್ಗಿ: ರಾಜ್ಯ ಸರ್ಕಾರದ ರೈತ ಹಾಗೂ ಜನ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತ ಮೋರ್ಚಾದಿಂದ ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಹಳೇ ತಹಸಿಲ್ ಕಚೇರಿಯಿಂದ ಮಿನಿ ವಿಧಾನಸೌಧದವರೆಗೆ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಮುಖಾಂತರ ಹೋರಾಟ ಮಾಡಲಾಯಿತು.

ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಮಾತನಾಡಿ, ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 19 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಭಾಗ್ಯಗಳನ್ನು ಜಾರಿಗೊಳಿಸುವ ನೆಪದಲ್ಲಿ ರೈತರ ಜೀವನದ ಜತೆ ಚಲ್ಲಾಟವಾಡುತ್ತಿದೆ. ಮಲ್ಲಾಬಾದ್ ಏತ ನೀರಾವರಿಗೆ ಸಮರ್ಪಕ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ಹಗಲೊತ್ತಿನಲ್ಲಿ ನಿರಂತರ 7 ಗಂಟೆ ವಿದ್ಯುತ್ ನೀಡಬೇಕು. ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್ ಹಿನ್ನೀರಿನಿಂದ ಹಾನಿಗೊಳಾದ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ರಾಜೇಶ್ವರಿ ಪಿ.ಎಸ್. ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ಮಲ್ಲಿನಾಥಗೌಡ ಯಲಗೋಡ, ಶೋಭಾ ಬಾಣಿ, ಧರ್ಮಣ್ಣ ದೊಡ್ಡಮನಿ, ಭೀಮರಾವ ಗುಜಗೊಂಡ, ಹಳ್ಳೆಪ್ಪಾಚಾರ್ಯ ಜೋಶಿ, ರೇವಣಸಿದ್ದಪ್ಪ ಸಂಕಾಲಿ, ಧರ್ಮಣ್ಣ ಇಟಗಾ, ಪ್ರವೀಣಕುಮಾರ ಕುಂಟೋಜಿಮಠ, ಸಿದ್ದಣ್ಣ ಹಾಲಗಡ್ಲಾ, ಭಾಗೇಶ ಹೋತಿನಮಡು, ಬಾಪುಗೌಡ ಬಿರಾಳ, ಸಿದ್ದು ದ್ಯಾಮಾ, ಗುರುರಾಜ ಸುಲಳ್ಳಿ, ಶಿವಪುತ್ರಪ್ಪ ಕೋಣಿನ್, ಸಂಗನಗೌಡ ರದ್ದೇವಾಡಗಿ, ಆನಂದ ದೇಸಾಯಿ, ಸಂತೋಷ ಮಲ್ಲಾಬಾದಿ, ಚಂದನ ಮಹೇಂದ್ರಕರ್, ಈರಣ್ಣ ಯಾದವ್, ಬಾಬು ಬಿ.ಪಾಟೀಲ್, ತಿಪ್ಪಣ್ಣ ರಾಠೋಡ್, ರಾಜಶೇಖರ ಗೌನಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net