

ಕಲಬುರಗಿ: ಜೇವರ್ಗಿಯಲ್ಲಿ ಕಿಡಿಗೇಡಿ ಯುವಕನ ಕಿರುಕುಳದಿಂದ ೧೪ ವರ್ಷದ ಬಾಲಕಿ ಆತ್ಮಹತ್ಯೆ ಪ್ರಕರಣ ಖಂಡಿಸಿ, ಆರೋಪಿಗೆ ಕಠಿಣ ಶಿಕ್ಷೆಯನ್ನು ವಿಧಿಸಲು ಆಗ್ರಹಿಸಿ ವಿವಿಧ ಸಂಘಟನೆಗಳು ಜ.೧೬ರಂದು ಕರೆ ನೀಡಿದ ಜೇವರ್ಗಿ ಬಂದ್‌ಗೆ ಬೆಂಬಲ ನೀಡಲಾಗುವುದು ಎಂದು ಜಿ¯್ಲÁ ಕೋಲಿ ಕಬ್ಬಲಿಗ ಸಮನ್ವಯ ಸಮಿತಿ ಮುಖಂಡ ಅವ್ವಣ್ಣ ಮ್ಯಾಕೇರಿ ಹೇಳಿದರು.
ಲೈಂಗಿಕ ಕಿರುಕುಳದಿಂದ ೧೪ ವರ್ಷದ ಬಾಲಕಿ ಆತ್ಮಹತ್ಯೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತ ವಿಷಯ. ಆರೋಪಿಗಳಿಗೆ ಕೂಡಲೇ ಕಠಿಣ ಶಿಕ್ಷೆ ಕೊಡಬೇಕು. ಬಾಲಕಿಯ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ, ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಯಡ್ರಾಮಿಯ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣವಾದಾಗಲೇ ಎಚ್ಚೆತ್ತುಕೊಂಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಜಿ¯್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಹತ್ಯಾಚಾರ, ಕೊಲೆ, ಹ¯್ಲÉ, ದರೋಡೆ ಹೆಚ್ಚುತ್ತಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಪೊಲೀಸ್ ಇಲಾಖೆ ಮತ್ತು ಜಿ¯್ಲÁಡಳಿತದ ವೈಫಲ್ಯ ಖಂಡಿಸಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಅಸಮರ್ಥ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಫಲ್ಯದಿಂದ ಜಿ¯್ಲÉಯ ಗ್ರಾಮೀಣ ವ್ಯಾಪ್ತಿಯಲ್ಲಿ ಅಪರಾಧಗಳು ಹೆಚ್ಚುತ್ತಿವೆ. ೧೧ ತಿಂಗಳಲ್ಲಿ ಸುಮಾರು ೨೨ ಮಹಿಳೆಯರ ಮೇಲೆ ಅತ್ಯಾಚಾರ, ೫೦ ಬಾಲಕಿಯರ ಮೇಲೂ ಅತ್ಯಾಚಾರ ಪ್ರಕರಣ ನಡೆದಿವೆ. ೪೪ ಕೊಲೆ, ೮೮ ಹ¯್ಲÉ, ೭೯ ದೌರ್ಜನ್ಯ, ೫೪೫ ಕಳ್ಳತನ ಹಾಗೂ ೪೫೦ ಜೂಜು ಪ್ರಕರಣಗಳಾಗಿವೆ ಎಂದು ಆರೋಪಿಸಿದರು.
ಬಸವರಾಜ ಬೂದಿಹಾಳ ಮಾತನಾಡಿ, ನಗರ ಸೇರಿ ಜಿಲ್ಲೆಯ ಎಲ್ಲೆಡೆ ಮಹಿಳೆಯರು ಮತ್ತು ಮಕ್ಕಳು ಜೀವ ಭಯದಲ್ಲಿ ತಿರುಗಾಡುವಂತಾಗಿದೆ. ಅಮಾಯಕರ ಮೇಲೆ ಹ¯್ಲÉ ಮಾಡಿ ರೌಡಿಗಳಂತೆ ವರ್ತಿಸುತ್ತಿರುವವರನ್ನು ಬಂಧಿಸಿ, ಸಮಾಜದಲ್ಲಿ ಶಾಂತಿಯ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.
ಸಂತೋಷ ತಳವಾರ, ಗುಂಡು ಐನಾಪುರ, ಬಸವರಾಜ ಗುಂಡಲಗೇರಿ, ಗುಂಡಪ್ಪ ಜಮಾದಾರ ಇತರರಿದ್ದರು.
ನಗರದಲ್ಲಿ ಹಲ್ಲೆ, ದೌರ್ಜನ್ಯ ನಿರಂತರ...: ನಗರದಲ್ಲಿ ಜನಸಾಮಾನ್ಯರ ಮೇಲೆ ಹಲ್ಲೆ, ದೌರ್ಜನ್ಯ ನಿರಂತರವಾಗಿ ನಡೆಯುತ್ತಿವೆ. ಜ.೧೨ರಂದು ಯುವಕ ಗುಂಡು ಜಮಾದಾರ ಮೇಲೆ ನಾಲ್ವರು ವಿನಾಕಾರಣ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದೇ ಘಟನೆಯಲ್ಲಿ ಇನ್ನೊಬ್ಬ ವ್ಯಕ್ತಿ ಜೀವನ್ಮರಣದ ಮಧ್ಯೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಮಾಯಕರನ್ನು ಬೆದರಿಸಿ, ಡಾನ್ ಆಗುವ ಪ್ರವೃತ್ತಿ ಹೆಚ್ಚುತ್ತಿದೆ. ಪೊಲೀಸರೇ ಮಧ್ಯಸ್ಥಿತಿ ವಹಿಸಿ, ಕೌಂಟರ್ ಕೇಸ್ ಕೊಡಿಸಿ ಹೊಂದಾಣಿಕೆಗೆ ಮುಂದಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಅವ್ವಣ್ಣ ಮ್ಯಾಕೇರಿ ಆಗ್ರಹಿಸಿದರು.
ಜಿಲ್ಲೆಯಲ್ಲಿ ಹಲ್ಲೆ, ಹತ್ಯೆ, ಅತ್ಯಾಚಾರ ನಡೆದಾಗ ಒಂದು ಜಾತಿಗೆ ಸೀಮಿತ ಮಾಡುತ್ತಿರುವುದು ಖಂಡನೀಯ. ಜಿಲ್ಲೆಯ ಶಾಂತಿ ಸುವ್ಯವಸ್ಥೆ ಹದಗೆಡುತ್ತಿರುವುದು ವಿರೋಧಿಸಿ ಬೃಹತ್ ಹೋರಾಟ ರೂಪಿಸಲು ಜಿಲ್ಲೆಯ ಎಲ್ಲ ಸಮಾಜದವರ, ಸಂತರು, ಸ್ವಾಮೀಜಿಗಳ ಸಭೆ ನಡೆಸಲಾಗುವುದು. | ಅವ್ವಣ್ಣ ಮ್ಯಾಕೇರಿ, ಮುಖಂಡ ಕೋಲಿ ಕಬ್ಬಲಿಗ ಸಮನ್ವಯ ಸಮಿತಿ