ಜೇನು ಸಾಕಣೆಯಿಂದ ಅಡಕೆ ಫಸಲು ಹೆಚ್ಚಳ

nrp honey
ಎನ್.ಆರ್.ಪುರದಲ್ಲಿ ಜೇನು ಸಾಕಣೆ ಮಾಹಿತಿ ಶಿಬಿರದಲ್ಲಿ ಪ್ರಗತಿಪರ ಜೇನು ಕೃಷಿಕ ಗಣೇಶ್ ಮಾಹಿತಿ ನೀಡಿದರು. ಜಿ.ಆರ್.ದಿವಾಕರ, ವಿದ್ಯಾನಂದಕುಮಾರ್, ರಕ್ಷಿತ್ ಇತರರಿದ್ದರು.
Published on

ಎನ್.ಆರ್.ಪುರ: ತೋಟಗಳಲ್ಲಿ ಜೇನು ಪೆಟ್ಟಿಗೆ ಇಟ್ಟು ಜೇನು ಸಾಕಣೆ ಮಾಡಿದರೆ ಅಡಕೆ ಫಸಲು ಜಾಸ್ತಿಯಾಗಲಿದೆ ಎಂದು ತೀರ್ಥಹಳ್ಳಿ ಪ್ರಗತಿಪರ ಜೇನು ಕೃಷಿಕ ಗಣೇಶ್ ತಿಳಿಸಿದರು.

ಬೈಪಾಸ್ ರಸ್ತೆಯ ನಾಗರಾಜ್ ಪುರಾಣಿಕ್ ಅವರ ಕೃಷಿ ಕ್ಷೇತ್ರದಲ್ಲಿ ರೋಟರಿ ಕ್ಲಬ್ ಹಾಗೂ ಸೀನಿಯರ್ ಚೇಂಬರ್ ಆಶ್ರಯದಲ್ಲಿ ನಡೆದ ಜೇನು ಸಾಕಣೆ ಮಾಹಿತಿ ಶಿಬಿರದಲ್ಲಿ ಮಾಹಿತಿ ನೀಡಿ, ಜೇನುಗಳಿಂದ ಪರಾಗಸ್ಪರ್ಶ ಆಗಲಿದೆ. ಇದರಿಂದ ಅಡಕೆ ಫಸಲು, ಕಾಳುಮೆಣಸು ಫಸಲು ಜಾಸ್ತಿಯಾಗಲಿದೆ ಎಂದರು.

ಜೇನು ತುಪ್ಪದಲ್ಲಿ ಔಷಧೀಯ ಗುಣ ಇದ್ದು 1 ಕೆಜಿಗೆ 1000 ರೂಪಾಯಿವರೆಗೂ ಮಾರಾಟ ಮಾಡಬಹುದು. ಜೇನು ತುಪ್ಪ ಆರೋಗ್ಯಕ್ಕೆ ಒಳ್ಳೆಯದು. ರೈತರು ಉಪ ಕಸಬಾಗಿ ಜೇನು ಕೃಷಿ ಮಾಡಬಹುದು. ಒಂದು ಜೇನು ಪೆಟ್ಟಿಗೆಯಿಂದ 10 ರಿಂದ 15 ಕೆಜಿ ಜೇನು ತುಪ್ಪ ಸಿಗಲಿದೆ. ರಾಣಿ ಜೇನು ಹುಳು 3 ವರ್ಷ ಬದುಕುತ್ತದೆ. ಆದರೆ ಗಂಡು ಜೇನು ಹುಳು 40 ದಿನ ಮಾತ್ರ ಬದುಕಲಿದೆ. ಜೇನು ಹುಳುಗಳು ತಾವಾಗೇ ಮನುಷ್ಯರಿಗೆ ತೊಂದರೆ ಮಾಡುವುದಿಲ್ಲ. ಆದರೆ ಜೇನು ಹುಳಕ್ಕೆ ಪೆಟ್ಟು ಮಾಡಿದರೆ ಮಾತ್ರ ಕಚ್ಚುತ್ತದೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಜಿ.ಆರ್.ದಿವಾಕರ, ವಿದ್ಯಾನಂದಕುಮಾರ್, ನಿರ್ದೇಶಕ ರಕ್ಷಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net