

ಸೋಮವಾರಪೇಟೆ: ಉತ್ತಮ ಗುಣಮಟ್ಟದ ಜೇನು ಸಾಕಣೆ ಲಾಭದಾಯಕವಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಪ್ರವೀಣ್ ಹೇಳಿದರು.
ತಾಲೂಕಿನ ಹರಗ ಗ್ರಾಮದ ಸಮುದಾಯ ಭವನದಲ್ಲಿ ಜೇನು ಕೃಷಿ ಬಗ್ಗೆ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಔಷಧಯುಕ್ತ ಹಾಗೂ ಉತ್ತಮ ಗುಣಮಟ್ಟದ ಜೇನು ಉತ್ಪಾದನೆಯಾಗುತ್ತಿದೆ. ರೈತರ ಉಪ ಕಸುಬು ಜೇನು ಕೃಷಿಯನ್ನು ಪುನಶ್ಚೇತನಗೊಳಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಸಹಾಯಧನದಲ್ಲಿ ಒಂದೊಂದು ಜೇನುಪೆಟ್ಟಿಗೆಯನ್ನು ವಿತರಿಸಲಾಗುತ್ತಿದೆಎಂದು ಹೇಳಿದರು.
ಉಪ ಕಸುಬಾದ ಜೇನು ಸಾಕಣೆ ಯಾವುದೇ ಕಾರ್ಮಿಕರ ನೆರವನ್ನು ಬಯಸದೇ ಲಾಭ ತಂದುಕೊಡುತ್ತದೆ. ಇದರಲ್ಲಿ ಮನೆಯವರು ಮಾತ್ರ ಕೆಲಸ ಮಾಡಿದರೆ ಸಾಕು. ನಾವು ಎಷ್ಟು ಪ್ರಮಾಣದಲ್ಲಿ ಜೇನು ಪೆಟ್ಟಿಗೆಯನ್ನಿಟ್ಟು ಸಾಕುತ್ತೇವೆಯೋ ಅಷ್ಟು ಲಾಭಗಳಿಸಲು ಸಾಧ್ಯವಾಗುತ್ತದೆ. ಮಹಿಳೆಯರೂ ಜೇನು ಕೃಷಿ ಮಾಡಬಹುದು ಎಂದು ಅವರು ವಿವರಿಸಿದರು.
ತೋಟಗಾರಿಕಾ ಇಲಾಖೆಯ ಸಹಾ