ಜೆಸ್ಕಾಂ ಸಬ್​ ಸ್ಟೇಷನ್​ನಿಂದ ನೀರಿನ ಸಮಸ್ಯೆ

KPTCL
Published on

ಕಲಬುರಗಿ: ಫಿರೋಜಾಬಾದ್​ ಗ್ರಾಮದ ರ‍್ವೇ ೧೩೮ರ ಜಮೀನಿಗೆ ಹೊಂದಿಕೊಂಡು ರ‍್ವೇ ೧೩೯ರಲ್ಲಿ ಸ್ಥಾಪಿಸಿರುವ ಕೆಪಿಟಿಸಿಎಲ್​ ಸಬ್​ ಸ್ಟೇಷನ್​ನಿಂದ ಬಸಿದ ನೀರು ಪಕ್ಕದ ಜಮೀನಿನಲ್ಲಿನ ಬೆಳೆ ಹಾನಿ ಮಾಡುತ್ತಿದ್ದು, ಪರಿಹಾರ ನೀಡಬೇಕು, ನೀರು ಬಸಿಯುವುದು ತಡೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥ ಅಬ್ದುಲ್​ ಲತ್​ೀ ಜಾಗೀರದಾರ್​ ಆಗ್ರಹಿಸಿದರು. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಕೆಪಿಟಿಸಿಎಲ್​ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ತಹಸೀಲ್ದಾರ್​, ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ರೈತರ, ಕೆಪಿಟಿಸಿಎಲ್​ ಮಧ್ಯೆ ಸಂಧಾನಕ್ಕೆ ತಹಸೀಲ್ದಾರ್​ ಸೂಚಿಸಿದ್ದರು ಸ್ಪಂದಿಸಿಲ್ಲ. ಕೂಡಲೇ ಪರಿಹಾರ ನೀಡಿ, ನೀರು ಬಸಿಯುವುದು ತಡೆಯದಿದ್ದರೆ ಸಬ್​ ಸ್ಟೇಷನ್​ ಎದುರು ಧರಣಿ ಕೂಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net