ಜೆಸ್ಕಾಂ ಶಾಕ್ : ಕೋರವಾರ ಶಹಾಬಾದ ಚಿತ್ತಾಪುರ ಸುತ್ತಲಿನ ಹಳ್ಳಿಗಳಲ್ಲಿ ಶುಕ್ರವಾರ ಕರೆಂಟ್ ಇರಲ್ಲ

Electricity (1)
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ಉಪವಿಭಾಗದ ೧೧೦ ಕೆ.ವಿ ಕೋರವಾರ್, ಚಿತ್ತಾಪೂರ್ ೧೧೦ ಕೆ.ವಿ, ಶಹಾಬಾದ್ ೧೧೦ ಕೆ.ವಿ. ವಾಡಿ ಎಲ್ಲಾ ಗ್ರಾಮಗಳಲ್ಲಿ ಆಗಸ್ಟ್ ೨೫ರಂದು ಬೆಳಗ್ಗೆ ೧೧ರಿಂದ ಮಧ್ಯಾಹ್ನ ೧ರವರೆಗೆ  ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕಾಳಗಿ ಉಪವಿಭಾಗ ವಿದ್ಯುತ್ ವಿತರಣಾ ಕೇಂದ್ರ  ೧೧೦ ಕೆವಿ. ಕಾಳಗಿ, ಚಿತ್ತಾಪೂರ ತಾಲೂಕಿನ ಎಲ್ಲಾ ಗ್ರಾಮಗಳು, ಶಹಾಬಾದ್ ವಿದ್ಯುತ್ ವಿತರಣಾ ಕೇಂದ್ರ ೧೧೦ ಕೆ.ವಿ. ವಾಡಿ  ರಾವೂರ್, ಮಾಲಗತ್ತಿ, ಕಮರವಾಡಿ, ಹಲಕಟ್ಟಾ, ಇಂಗಳಗಿ, ವಾಡಿ ಟೌನ್, ಗ್ರಾಮ ಪಂಚಾಯಿಯ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ತೊಂದರೆಯಾಗಲಿದೆ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net