

ಚಿತ್ತಾಪುರ: ಜೆಸ್ಕಾಂ ಎಲ್‌ಟಿ ರೈಟನಿಂಗ್ ವಿಭಾಗದಲ್ಲಿ ಕಾರ್ಯನಿರ್ವಾಹಿಸುತ್ತಿರುವ ಇಇ ಸಂತೋಷ ಡಾಂಗೆ ಅವರನ್ನು ವರ್ಗಾವಣೆ ಮಾಡಿ ಬೇರೊಬ್ಬರನ್ನು ನಿಯೋಜಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಚಿತ್ತಾಪುರ ತಾಲೂಕು ಪದಾಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಅವರು ಪ್ರಭಾರ ವಹಿಸಿಕೊಂಡ ನಂತರ ಚಿತ್ತಾಪುರ ತಾಲೂಕಿನಲ್ಲಿ ವಿದ್ಯುತ್ ಸುರಕ್ಷತೆ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸುತ್ತಿಲ್ಲ. ಬಜೆಟ್ ಹಿಂದಕ್ಕೆ ಕಳಿಸುತ್ತಿದ್ದಾರೆ. ಅಸಭ್ಯವಾಗಿ ವರ್ತಿಸುತ್ತಾರೆ, ಗ್ರಾಹಕರು ಕುಳಿತುಕೊಳ್ಳಲು ಹಾಕಿದ ಖುರ್ಚಿಗಳನ್ನು ತೆಗೆಸಿದ್ದಾರೆ. ಜನರಿಗೆ ಸ್ಪಂದಿಸುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.ತಾಲೂಕಿನಲ್ಲಿ ೫೦-೬೦ ವಿದ್ಯುತ್ ಗುತ್ತಿಗೆದಾರರಿದ್ದು ತೊಂದರೆ ಕೊಡುತ್ತಿದ್ದಾರೆ. ಕೆಲಸ ಮಾಡಿದ ಬಿಲ್ ಕೊಡದಿರುವುದರಿಂದ ಸಂಸಾರ ನಡೆಸುವುದು ಕಷ್ಟವಾಗುತ್ತಿದೆ ಹೀಗಾಗಿ ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪದಾಧಿಕಾರಿಗಳು ಎಚ್ಚರಿಸಿದ್ದಾರೆ.
ಸಂಘದ ತಾಲೂಕು ಅಧ್ಯP್ಷÀ ಬಸವರಾಜ ಅಳ್ಳೋಳ್ಳಿ, ಉಪಾಧ್ಯP್ಷÀ ಭೀಮಾಶಂಕರ ಪೂಜಾರಿ, ಪ್ರಧಾನ ಕಾರ್ಯದರ್ಶಿ ದೀಪಕ್ ಬೆಳಕುಣಿ, ಜಂಟಿ ಕಾರ್ಯದರ್ಶಿ ಅಪ್ಸರ್ ಅಹ್ಮದ್, ಖಜಾಂಚಿ ಪ್ರಶಾಂತ ಗರ್ಜೆ, ನಾಗು ಮರಗೋಳ ಇತರರಿದ್ದರು.