ಜೆಸ್ಕಾಂ ಇಇ ರಾಘವೇಂದ್ರರಿಂದ ಟ್ರಸ್ಟ್ನ ಕಾರ್ಯ ಮೆಚ್ಚುಗೆ

navanandi1 (3)
Published on

ಯಾದಗಿರಿ: ಲಾಕ್ಡೌನ್ ಹಿನ್ನೆಲೆಯಲ್ಲಿ ನವನಂದಿ ಟ್ರಸ್ಟ್ನಿಂದ ನಡೆಸುತ್ತಿರುವ ಅನ್ನದಾಸೋಹ ಕಾರ್ಯ ಗುರುವಾರ ಜೆಸ್ಕಾಂ ಇಇ ಡಿ. ರಾಘವೇಂದ್ರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಯ ಸೇವಾ ಕಾರ್ಯ ಹಾಗೂ ಕರವೇ ನೆರವಿನ ಸಹಯೋಗದ ವಿನೂತನ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ನಾಡು ನುಡಿ ನೆಲ ಜಲ ಸಂರಕ್ಷಣೆಗೆ ಹೋರಾಡುವ ಕರವೇ ಜಂಟಿಯಾಗಿ ಇಂದಿನ ಕಾರ್ಯಕ್ರಮ ನಡೆಸುತ್ತಿರುವುದು ಮಾದರಿಯಾಗಿದೆ. ಕರೊನಾ ಕಾರಣ ಉಂಟಾಗಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುವಂತ ಸಂದರ್ಭ ನಿಮರ್ಾಣವಾಗಿದೆ ಇಂತಹ ಸೇವೆ ಕಾರ್ಯದಲ್ಲಿ ದೇಶವೇ ಒಂದಾಗುತ್ತಿದೆ. ನವನಂದಿ ಶಿಕ್ಷಣ ಸಂಸ್ಥೆ ಇಂತಹ ಒಗ್ಗೂಡಿಸಿ ಸೇವೆ ನೀಡುವ ಕಾರ್ಯ ಮಾಡುತ್ತಿದೆ ಎಂದು ಅವರು ನುಡಿದರು.

ನಗರಸಭೆ ಸದಸ್ಯ ಹಣಮಂತ ನಾಯಕ, ಸಂಸ್ಥೆ ಅಧ್ಯಕ್ಷ ಬಸವರಾಜ ವಿ. ಶಿವರಾಯ ಯಲ್ಹೇರಿ, ಕರವೆ ಜಿಲ್ಲಾಧ್ಯಕ್ಷ ಟಿ.ಎನ್. ಬೀಮುನಾಯಕ, ವಿಶ್ವಾರಾಧ್ಯ ದಿಮ್ಮೆ, ದೀಪಕ, ಸಾಹೆಬರೆಡ್ಡಿ, ಚೆನ್ನಾರೆಡ್ಡಿ ಅಬ್ಬೆತುಮಕೂರು, ವಿಜಯ ಮುರಡೆ, ಶರಣು ಕೌಳೂರು ಯಲ್ಹೇರಿ, ಕಾಶಿನಾಥ ಮಡಿವಾಳ, ನಾಗಯ್ಯ ಸ್ವಾಮಿ ಇಂಗಳಗಿ, ನರಸಪ್ಪ ನಾಯಕ ಬುಡಾಯಿನೋರ್, ಸವಿತಾ ಇಂಗಳೆ, ಗಿರೀಶ ಗಣಪೂರ, ಅಕ್ಷಯ ಮೊರಡೆ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net