ಜೆಸಿಬಿ ಸಹಾಯದಿಂದ ರಸ್ತೆ ದಾಟಿದ ಮಕ್ಕಳು!

11skpp2
Published on


ಸಕಲೇಶಪುರ: ತಾಲೂಕಿನಲ್ಲಿ ಗುರುವಾರವೂ ಆಶ್ಲೇಷ ಮಳೆಯ ಅರ್ಭಟ ಅತಿಯಾಗಿದ್ದು ಭಾರಿ ಗಾಳಿ ಮಳೆಯಿಂದ ತಾಲೂಕಿನಲ್ಲಿ ಹಲವು ಅವಘಡಗಳು ಸಂಭವಿಸಿವೆ.


ತಾಲೂಕಿನ ವೆಂಕಟಹಳ್ಳಿ-ಜಂಬರಡಿ ಗ್ರಾಮ ಸಂಪರ್ಕ ಸೇತುವೆ ಮುಳಗಡೆಯಾಗಿದ್ದರಿಂದ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಜೆಸಿಬಿ ಸಹಾಯದಿಂದ ರಸ್ತೆ ದಾಟುವ ಸ್ಥಿತಿ ನಿರ್ಮಾಣವಾಗಿತ್ತು. ತಾಲೂಕಿನ ಕುರುಭತ್ತೂರು ಗ್ರಾಪಂ ವ್ಯಾಪ್ತಿಯ ನಿಡಿಗೆರೆ ಗ್ರಾಮದ ಬೇಲೂರೇಗೌಡ ಎಂಬುವರ ಮನೆಯ ಮೇಲೆ ಮರ ಬಿದ್ದು ಹಾನಿಗೊಳಗಾಗಿದೆ.
ಬಾಳ್ಳುಪೇಟೆ ಗ್ರಾಪಂ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ ಗ್ರಾಮದ ರಸ್ತೆಯಲ್ಲಿ ಬೀಳುವ ಹಂತದಲ್ಲಿದ್ದ ಮರಗಳನ್ನು ಗ್ರಾಪಂ ಸದಸ್ಯರ ಸಹಾಯದಿಂದ ಸೆಸ್ಕ್ ಸಿಬ್ಬಂದಿ ಗುರುವಾರ ತೆರವುಗೊಳಿಸಿದರು. ಅಲ್ಲಲ್ಲಿ ಗಾಳಿಯಿಂದ ಹಲವು ಮರಗಳು ವಿದ್ಯುತ್ ಕಂಬ ಹಾಗೂ ರಸ್ತೆಗಳ ಮೇಲೆ ಉರುಳಿದ್ದರಿಂದ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸುಗಮ ಸಂಚಾರ ಹಾಗೂ ವಿದ್ಯುತ್ ವ್ಯತ್ಯಯ ಉಂಟಾಗಿದ್ದು ಕುಡಿಯುವ ನೀರಿಗೂ ತೊಂದರೆ ಎದುರಾಗಿದೆ. ಭಾರಿ ಗಾಳಿ ಮಳೆ ಹಿನ್ನೆಲೆಯಲ್ಲಿ ತಹಸೀಲ್ದಾರ್ ಜೈಕುಮಾರ್ ಗುರುವಾರ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net