ಜೆಸಿಬಿ ಡಿಕ್ಕಿಯಾಗಿ ಬೈಕ್ ಸಾವು

ACCIDENT
Published on

ನಂಜನಗೂಡು: ತಾಲೂಕಿನ ಮರಳೂರು ಹಳ್ಳಿಕೆರೆಹುಂಡಿ ಮಾರ್ಗಮಧ್ಯೆ ಸೋಮವಾರ ಸಂಜೆ ಬೈಕ್ ಮತ್ತು ಜೆಸಿಬಿ ನಡುವೆ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮರಳೂರು ಗ್ರಾಮದ ಶಿವಣ್ಣ ಪುತ್ರ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ನಂದೀಶ(18) ಮೃತರು. ಮೃತ ನಂದೀಶ ಸೋಮವಾರ ಸಂಜೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಯನ್ನು ಕರೆತರಲೆಂದು ತೋಟಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಳ್ಳಿಕರೆಹುಂಡಿ ಗ್ರಾಮದ ಮಧ್ಯೆದಲ್ಲಿರುವ ತಿರುವಿನ ಬಳಿ ವೇಗವಾಗಿ ಬರುತ್ತಿದ್ದ ಜೆಸಿಬಿ ಬೈಕ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ನಂದೀಶ ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ.

ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಆಗಮಿಸಿ ಮಹಜರು ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net