

ಚಿಕ್ಕಮಗಳೂರು: ಜೆಸಿಐ ಒಂದು ಅಂತರಾಷ್ಟಿçÃಯ ಯುವ ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿದ್ದು, ಕಳೆದ ೧೧೦ ವರ್ಷಗಳಿಂದ ಜಗತ್ತಿನ ೧೨೫ಕ್ಕೂ ಹೆಚ್ಚಿನ ರಾಷ್ಟದಲ್ಲಿ ಸಕ್ರಿಯವಾಗಿ ಸಮಾಜಮುಖಿ ಕಾರ್ಯ ಮಾಡುತ್ತಾ ಬಂದಿದೆ. ಜೆಸಿಐ ಭಾರತ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸೆ. ೯ ರಿಂದ ಸೆ. ೧೫ರವರೆಗೆ ಜೆ ಸಿ ಸಪ್ತಾಹವನ್ನು ಆಯೋಜಿಸಿದೆ ಎಂದು ಜೆಸಿಐ ಚಿಕ್ಕಮಗಳೂರು ಮಲ್ನಾಡ್ ಘಟಕದ ಅಧ್ಯಕ್ಷ ಜೆಸಿ ಪ್ರದೀಪ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಸಿಐ ಚಿಕ್ಕಮಗಳೂರು ಮಲ್ನಾಡ್ ವತಿಯಿಂದ ಚಿಕ್ಕಮಗಳೂರಿನ ವಿವಿದೆಡೆ ೭ ದಿನಗಳ ಕಾಲ ವಿವಿಧ ಸಮಾಜಿಕ ಕಳಕಳಿ, ತರಬೇತಿ ಆಟೋಟ ಸ್ಪರ್ದೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜೆಸಿಐ ಭಾರತದ ನಿರ್ದೇಶನದಂತೆ ಮೊದಲ ದಿನದಂದು ಜೆಸಿಐ ಬಾವುಟವನ್ನು ನಗರದ ಇನ್ನೋವೇಟಿವ್ ಸ್ಕೂಲ್‌ನಲ್ಲಿ ಹಾರಿಸುವ ಮೂಲಕ ೭ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಎರಡನೇ ದಿನ ಡಿಜಿಟಲ್ ವಿಷಯದ ಕುರಿತು ಇದೇ ಶಾಲೆಯಲ್ಲಿ ತರಬೇತಿ ಹಾಗೂ ಮಹಿಳೆಯರಿಗೆ ಕೌಶಲ್ಯ ತರಬೇತಿಯನ್ನು ಆಯೋಜಿಸಲಾಗಿದೆ. ಮೂರನೇ ದಿನ ಜೆಸಿ ಸದಸ್ಯರಿಗೆ ಒಳಾಂಗಣ ಕ್ರೀಡೆಗಳು ಹಾಗೂ ಜೂಂಬಾ ಅವಧಿ ಹಮ್ಮಿಕೊಳ್ಳಲಾಗಿದೆ. ನಾಲ್ಕನೇ ದಿನ ಉದ್ಯಮಿಗಳಿಂದ ಭಾಷಣ, ಐದನೇ ದಿನ ಮಾನವ ಹಕ್ಕುಗಳ ಕುರಿತು ಕಾರ್ಯಕ್ರಮ ಮತ್ತು ಆರನೇ ದಿನ ಸಾರ್ವಜನಿಕರು ಜೆಸಿಗೆ ಸೇರ್ಪಡೆಗೊಳ್ಳಲು ಆಹ್ವಾನ ನೀಡುವುದು ಮತ್ತು ಕೊನೆಯ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೃಂಭಣೆಯಿAದ ಜೆಸಿ ಸಪ್ತಾಹವನ್ನು ಸಂಪನ್ನಗೊಳಿಸಲಾಗುವುದು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಸಿ ಉಪಾಧ್ಯಕ್ಷರಾದ ಸಾಗರ್, ನಿಕಟಪೂರ್ವ ಅಧ್ಯಕ್ಷ ರಘುನಂದನ್, ನಿರ್ದೇಶಕರಾದ ಜಯಚಂದ್ರ, ಗುರುಮೂರ್ತಿ ನಾಡಿಗ್ ಉಪಸ್ಥಿತರಿದ್ದರು.