ಎ.ಅಪ್ಪಾಜಿಗೌಡ, ಮುಳಬಾಗಿಲು
ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ಕಾವು ಏರುತ್ತಿದ್ದು, ಜೆಡಿಎಸ್, ಸಮೃದ್ಧಿ ವಿ.ಮಂಜುನಾಥ್ ಅವರನ್ನು ಅಭ್ಯರ್ಥಿಯನ್ನಾಗಿ ೂಷಿಸಿದೆ. ಕಾಂಗ್ರೆಸ್, ಬಿಜೆಪಿಯಲ್ಲಿ ಇನ್ನೂ ೂಷಣೆ ಮಾಡಿಲ್ಲ. ಜೆಡಿಎಸ್ನಲ್ಲಿ ಅತೃಪ್ತಿ ನಡುವೆಯೂ ಅಬ್ಬರದ ಪ್ರಚಾರ ಮುಂದುವರಿದಿದೆ.
ಸಮೃದ್ಧಿ ವಿ.ಮಂಜುನಾಥ್ ನೇತೃತ್ವದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್.ನಾಗರಾಜ್, ಪ್ರಧಾನ ಕಾರ್ಯದರ್ಶಿ ನಲ್ಲೂರು ರುಪತಿರೆಡ್ಡಿ, ವಕ್ತಾರ ಎಂ.ಎಸ್.ಶ್ರೀನಿವಾಸರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷ ಎಂ.ಆರ್.ಮುರಳಿ, ಜಿಪಂ ಮಾಜಿ ಸದಸ್ಯ ಬಿ.ವಿ.ಸಾಮೇಗೌಡ, ತಾಪಂ ಮಾಜಿ ಸದಸ್ಯ ಡಾ.ಸಿ.ಎನ್.ಪ್ರಕಾಶ್ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಬ್ಯಾಟಿಂಗ್ ಮಾಡುತ್ತಿದ್ದಾರೆ. ಎದುರಾಳಿ ತಂಡಗಳು ಫೀಲ್ಡ್ಗೆ ಇಳಿಯದೆ ಅಭ್ಯಾಸ ಪಂದ್ಯಗಳನ್ನು ಆಡಿಕೊಳ್ಳುತ್ತಿರುವುದರಿಂದ ೇತ್ರದಲ್ಲಿ
ರೋಚಕತೆ ಕಂಡು ಬರುತ್ತಿಲ್ಲ.
ಜೆಡಿಎಸ್ ಮಾಜಿ ಅಧ್ಯಕ್ಷ ಅಲಂಗೂರು ಶಿವಣ್ಣ, ನಗರ ಟಕ ಅಧ್ಯಕ್ಷ ಟಿ.ಎಚ್.ತೇಜೋರಮಣ, ಮುಖಂಡರಾದ ಡಾ.ವಜಾಯಿತುಲ್ಲಾ ಖಾನ್, ಜಿ.ನಾಗರಾಜು, ಸನ್ಯಾಸನಹಳ್ಳಿ ತಿಮ್ಮರಾಜು, ಗೊಲ್ಲಹಳ್ಳಿ ಸತೀಶ್, ನಾಗರಾಜ್, ಸೇರಿದಂತೆ ಹಲವರು ಸಮೃದ್ಧಿ ಬಗ್ಗೆ ಮುನಿಸಿಕೊಂಡಿದ್ದಾರೆ. ಈ ಗುಂಪನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮೃದ್ಧಿ ತಂಡ 2&3 ಬಾರಿ ಪ್ರಯತ್ನ ಮಾಡಿದ್ದು, ಅದು ಮುಂದುವರಿದಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನಗಳು ನಡೆಯುತ್ತಿದೆ.
ಕೆಎಚ್ ನಿಷ್ಠರಿಗೆ ಮಣೆ: ಜೆಡಿಎಸ್ನಿಂದ ಶಿವಣ್ಣ ತಂಡ ಹೊರಹೋದರೆ ಹೆಚ್ಚುವರಿಯಾಗಿ ಆ ಮತಗಳ ಕ್ರೋಡಿಕರಣಕ್ಕೆ ಸಮೃದ್ಧಿ ತಂಡ ಕಾರ್ಯಾಚರಣೆ ಮಾಡುತ್ತಿದೆ. ಶಾಸಕ ಎಚ್.ನಾಗೇಶ್ ಬಲಗೈ ಬಂಟ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಗೊಲ್ಲಹಳ್ಳಿ ಜಗದೀಶ್ ಅವರನ್ನು ಜೆಡಿಎಸ್ಗೆ ಸೇರ್ಪಡೆ ಮಾಡಿಕೊಂಡಿದ್ದು ಮುಂದುವರಿದ ಭಾಗವಾಗಿ ತಾಪಂ ಮಾಜಿ ಅಧ್ಯಕ್ಷ ಎ.ವಿ.ಶ್ರೀನಿವಾಸ್ ಅವರನ್ನು ಕರೆತರುವ ಸಿದ್ಧತೆಗಳು ನಡೆಯುತ್ತಿವೆ. ಇತ್ತೀಚೆಗೆ ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಆನಂದರೆಡ್ಡಿ ಅವರನ್ನು ಬದಲಾವಣೆ ಮಾಡಿದ್ದು, ಇದರಿಂದ ಬೇಸರಗೊಂಡಿರುವ ರೆಡ್ಡಿ ಮನೆಗೆ ಸಮೃದ್ಧಿ ನೇತೃತ್ವದ ತಂಡ ಭೇಟಿ ನೀಡಿ ಜಿಪಂ ಮಾಜಿ ಅಧ್ಯೆ ಗೀತಮ್ಮ ಮತ್ತು ಅವರ ಪತಿ ಆನಂದರೆಡ್ಡಿ ಸೇರಿದಂತೆ ಕೆ.ಎಚ್.ಮುನಿಯಪ್ಪ ಬೆಂಬಲಿಗರನ್ನು ಸೇರಿಸಿಕೊಳ್ಳುವ ಪ್ರಯತ್ನ ಆರಂಭಿಸಿದೆ. ಪೋನ್ ಮೂಲಕ ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿಸಿ ಸೂಕ್ತ ಸ್ಥಾನಮಾನ ಮತ್ತು ಜೆಡಿಎಸ್ ಅಧಿಕಾರಕ್ಕೆ ಬರುವ ಖಚಿತತೆಯ ಭರವಸೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿವೆ.
ಮಾರ್ಚ್ನಲ್ಲಿ ಕೊತ್ತೂರು ಆರ್ಭಟ: ಕಾಂಗ್ರೆಸ್ನ ಹುರಿಯಾಳು ಆಗಲು ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ಗೆ, ಜಾತಿ ಪ್ರಮಾಣ ಪತ್ರ ಅಡ್ಡಿಯಾಗಿದೆ. ಈ ಬಗ್ಗೆ ಡಿಸಿ ವರದಿಯನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದು, ಚುನಾವಣೆ ವೇಳೆಗೆ ಜಾತಿ ಪ್ರಮಾಣ ಪತ್ರ ಸಿಕ್ಕರೆ ಜಿದ್ದಾಜಿದ್ದಿ ಪೈಪೋಟಿ ಖಚಿತವಾಗಲಿದೆ. ಕೊತ್ತೂರು ಬ್ಯಾಟಿಂಗ್ ಆರ್ಭಟ ಮಾರ್ಚ್ನಲ್ಲಿ ಆರಂಭವಾಗಬಹುದು ಎಂಬ ಲೆಕ್ಕಾಚಾರವಿದೆ. ಕಳೆದ ಬಾರಿ ಪೇತರ ಅಭ್ಯರ್ಥಿಯಾಗಿದ್ದ ಎಚ್.ನಾಗೇಶ್ಗೆ ಅವರನ್ನು ಗೆಲ್ಲಿಸಲು ಯಶಸ್ವಿಯಾಗಿದ್ದರು. ಸಮೃದ್ಧಿ ವಿ.ಮಂಜುನಾಥ್ 7 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಅಂದಿನಿಂದ ೇತ್ರದಲ್ಲಿ ನಿರಂತರವಾಗಿ ಕಾರ್ಯಕರ್ತರ ಸಂಪರ್ಕದೊಂದಿಗೆ ಜೆಡಿಎಸ್ನ ಮುಂಚೂಣಿ ನಾಯಕರಾಗಿ ಹೊರಹೊಮ್ಮಿದ್ದು ಸ್ಥಳಿಯ ಮುಖಂಡರಲ್ಲಿನ ಗೊಂದಲ ಹೋಗಲಾಡಿಸಲು ಹೆಣಗಾಡುತ್ತಿದ್ದಾರೆ.
ತಾಲೂಕಿನಲ್ಲಿ ಹದಗೆಟ್ಟಿರುವ ಆಡಳಿತವನ್ನು ಸರಿದಾರಿಗೆ ತಂದು, ಸೌಲಭ್ಯಗಳನ್ನು ಕಲ್ಪಿಸಲು ಜೆಡಿಎಸ್ ಆಯ್ಕೆಯಾಗಬೇಕಾಗಿದೆ. ಇಲ್ಲಿ ಶಾಸಕರಾಗುವವರ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ. ಎಚ್.ಡಿ.ಕುಮಾರಸ್ವಾಮಿ 3ನೇ ಬಾರಿ ಸ್ವಂತ ಬಲದ ಮೇಲೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಸಮೃದ್ಧಿ ವಿ.ಮಂಜುನಾಥ್ ಜೆಡಿಎಸ್ ಅಭ್ಯರ್ಥಿ
ಕಳೆದ ವಾರ ಸಿನಿಗೇನಹಳ್ಳಿ ಮನೆಗೆ ಜೆಡಿಎಸ್ ಮುಖಂಡರು ಬಂದು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ನಾವು ನಿಷ್ಠಾವಂತ ಕಾಂಗ್ರೆಸ್ಸಿಗರಾಗಿದ್ದು, ನಮ್ಮನ್ನು ಕನಿಷ್ಠ ವಿಚಾರ ಮಾಡದೆ ಬ್ಲಾಕ್ ಅಧ್ಯಕ್ಷರ ಬದಲಾವಣೆ ಮಾಡಿರುವುದು ನೋವಿನ ಸಂಗತಿ. ಇದನ್ನು ಗಮನಿಸಿ ಜೆಡಿಎಸ್ ಆಹ್ವಾನಿಸಿದ್ದು, ಮಾಜಿ ಸಿಎಂ ಎಚ್ಡಿಕೆ ಅವರಿಂದಲೂ ಮಾತನಾಡಿಸಿರುವುದು ನಿಜ. ಅದರೆ ದಿಢೀರ್ ನಿರ್ಧಾರ ಸಾಧ್ಯವಿಲ್ಲ. ಬದಲಾವಣೆ ರಾಜಕೀಯದಲ್ಲಿ ಸಾಮಾನ್ಯ. ಜಿ.ಆನಂದರೆಡ್ಡಿ ಆವಣಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ
ಜೆಡಿಎಸ್ ಮುಖಂಡರು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಬೆಂಬಲಿಗರೊಂದಿಗೆ ಸಭೆ ನಡೆಸಿ ರಾಜಕೀಯ ಆಗು&ಹೋಗುಗಳನ್ನು ಗಮನಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಸದ್ಯಕ್ಕೆ ತಟಸ್ಥನಾಗಿದ್ದೇನೆ. ಹಿಂದುಳಿದ ವರ್ಗದವರು ರಾಜಕೀಯವಾಗಿ ಬೆಳೆಯಲು ಅಷ್ಟು ಸುಲಭವಾಗಿ ಬಿಡುವುದು ಕಷ್ಟ ಸಾಧ್ಯವಾಗಿದೆ. ಎ.ವಿ.ಶ್ರೀನಿವಾಸ್ ತಾಪಂ ಮಾಜಿ ಅಧ್ಯಕ್ಷ