

ಬೆಟ್ಟದಪುರ: ರಾಷ್ಟ್ರೀಯ ಪಕ್ಷಗಳ ಅಧಿಕಾರದಿಂದ ರಾಜ್ಯ ಜನರು ಬೇಸತ್ತು ಹೋಗಿದ್ದು, ಪ್ರಾದೇಶಿಕ ಪಕ್ಷದ ಕಡೆ ಒಲವು ಹೊಂದಿದ್ದಾರೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಸಮೀಪದ ಗೊರಹಳ್ಳಿ ಗ್ರಾಮದಲ್ಲಿ ಭಾನುವಾರ ಜೆಡಿಎಸ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಕಷ್ಟ ಸುಖಕ್ಕೆ ರೈತರ ಮಕ್ಕಳೇ ಬರಬೇಕು ಎಂಬ ನಿಟ್ಟಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆ ಕೈಗೊಂಡಿದ್ದಾರೆ. ದಲಿತ ಸಮುದಾಯದ ಬಗ್ಗೆ ಜೆಡಿಎಸ್‌ಗೆ ಮಾತ್ರ ಕಾಳಜಿ ಇದೆ ಎಂದರು.
ದಸಂಸ ಮುಖಂಡ ಐಲಾಪುರ ರಾಮು ಮಾತನಾಡಿ, ಕಾಂಗ್ರೆಸ್ ಪಕ್ಷವು ದಲಿತರನ್ನು ಮತಗಳಿಗಾಗಿ ಮಾತ್ರ ಬಳಸಿಕೊಂಡಿದೆ. ಸಮುದಾಯದ ಅಭಿವೃದ್ಧಿಗೆ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
ಗ್ರಾಮದ ದಲಿತ ಕಾಲನಿಯಲ್ಲಿ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಯಿತು. ಗ್ರಾಮದ ಹಲವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ವಿದ್ಯಾಶಂಕರ್, ಗ್ರಾಪಂ ಸದಸ್ಯ ದೇವೇಗೌಡ, ಮುಖಂಡರಾದ ಕರಡಿಪುರ ಕುಮಾರ್, ಸೈಯದ್ ಹಸಿಬ್, ಸ್ವಾಮೀಗೌಡ, ರಂಗನಾಥ, ಜವರಯ್ಯ, ಸೈಯದ್ ಯುನಿಖಾನ್, ಮಂಜು ಮಾಸ್ಟರ್, ಚಾಮಣ್ಣ, ಹರೀಶ್, ಪುನೀತ್, ವಸಂತ್, ಸಂಜು, ಪ್ರದೀಪ್, ರಘು, ನಾಗೇಂದ್ರ ಉಮೇಶ್ ಇತರರು ಇದ್ದರು.