ಜೆಡಿಎಸ್​ ಸದಸ್ಯತ್ವ ಅಭಿಯಾನಕ್ಕೆ ಚಾಲನೆ 4ಕ್ಕೆ

NIKHIL KUMARASWAMY
NIKHIL KUMARASWAMY
Published on

ಕಲಬುರಗಿ: ರಾಜ್ಯಾದ್ಯಂತ ಜೆಡಿಎಸ್​ ಸಂಟನೆ ಬಲಗೊಳಿಸಿ, ಪಕ್ಷದ ಶಕ್ತಿ ವೃದ್ಧಿಗೆ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದು, ಜನರೊಂದಿಗೆ ಜನತಾದಳ ಅಭಿಯಾನಕ್ಕೆ ಜು.೪ರಂದು ಕಲಬುರಗಿಗೆ ಜೆಡಿಎಸ್​ ಯುವ ಟಕದ ರಾಜ್ಯಾಧ್ಯಕ್ಷರಾದ ನಿಖಿಲ್​ ಕುಮಾರಸ್ವಾಮಿ ಅವರು ಆಗಮಿಸುತ್ತಿದ್ದು, ಸದಸ್ಯತ್ವ ಅಭಿಯಾನಕ್ಕೆ ಚಾಲನೆ, ಪಕ್ಷದ ಬೃಹತ್​ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್​ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್​ ತಿಳಿಸಿದರು.

ಜು.೪ರಂದು ಬೆಳಗ್ಗೆ ೧೦ಕ್ಕೆ ನಗರದ ವಿಶ್ವವಿದ್ಯಾಲಯದಿಂದ ಬಳಿಯಿಂದ ಜೆಡಿಎಸ್​ ಕಚೇರಿವರೆಗೆ ಬೃಹತ್​ ಬೈಕ್​ ರ‍್ಯಾಲಿ ನಡೆಸಲಾಗುವುದು. ನಂತರ ವೀರಶೈವ ಕಲ್ಯಾಣ ಮಂಟಪದಲ್ಲಿ ಜೆಡಿಎಸ್​ ಪಕ್ಷದ ಬೃಹತ್​ ಸಮಾವೇಶ, ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿಖಿಲ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದಲ್ಲಿ ೫೮ ದಿನ ೧೧೦ ವಿಧಾನಸಭಾ ಕ್ಷೇತ್ರಗಳಲ್ಲಿ ಜನರೊಂದಿಗೆ ಜನತಾದಳ ಕರ‍್ಯಕ್ರಮ ಹಮ್ಮಿಕೊಂಡಿದ್ದು, ಅದರ ಭಾಗವಾಗಿ ಜಿಲ್ಲೆಯಲ್ಲೂ ವಿವಿಧ ಕರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಜೆಡಿಎಸ್​ ಕರ‍್ಯಾಧ್ಯಕ್ಷ ದೊಡ್ಡಪ್ಪ ಗೌಡ ಪಾಟೀಲ್​ ಮಾತನಾಡಿ, ಮಧ್ಯಾಹ್ನ ೧೨ಕ್ಕೆ ಜೇರ‍್ಗಿ ಪಟ್ಟಣದ ಭೂತಪೂರ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ ೧೨ಕ್ಕೆ ಜೇರ‍್ಗಿ, ಯಡ್ರಾಮಿ ತಾಲೂಕು ಟಕದಿಂದ ಬೃಹತ್​ ಸಮಾವೇಶ, ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಸಂಜೆ ನಗರದ ಶರಣಬಸವೇಶ್ವರ ದೇವಸ್ಥಾನ ಹಾಗೂ ಖ್ವಾಜಾ ಬಂದೇ ನವಾಜ್​ ರ‍್ಗಾಕ್ಕೆ ಭೇಟಿ ನೀಡಿ, ರ‍್ಶನ ಪಡೆಯಲಿದ್ದಾರೆ. ಇತ್ತೀಚೆಗೆ ನಿಧನರಾದ ಜೆಡಿಎಸ್​ ಮುಖಂಡ, ಮಾಜಿ ಮಹಾಪೌರ ಜಿ.ಎಸ್​.ರೆಹೆವತ್​, ಮಾಜಿ ಉಪಸಭಾಪತಿ ಡೇವಿಡ್​ ಸಿಮಿಯೋನ ಅವರ ಮನೆಗೆ ಭೇಟಿ ನೀಡಲಿದ್ದಾರೆ ಎಂದರು.

ಸಮಾವೇಶದಲ್ಲಿ ಮಾಜಿ ಸಚಿವರಾದ ವೆಂಕಟರಾವ್​ ನಾಡಗೌಡ, ಬಂಡೆಪ್ಪ ಖಾಶೆಂಪುರ, ಶಾಸಕ ಶರಣಗೌಡ ಕಂದಕೂರ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ್​, ಮಾಜಿ ಸಚಿವ ಹಣಮಂತಪ್ಪ ಅಲ್ನೋಡ, ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ರಾಜ್ಯ ಮಹಿಳಾ ಘಟಕದ ಅಧ್ಯೆ ರಶ್ಮಿ ರಾಮೇಗೌಡ, ರಾಜ್ಯ ಕರ‍್ಯರ‍್ಶಿ ಶಿವಕುಮಾರ ನಾಟಿಕಾರ್​ ಭಾಗವಹಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net