

| ಜಮೀನು ವಿವಾದ
|ಜೆಡಿಎಸ್ ರಾಷ್ಟೀಯ ಉಪಾಧ್ಯಕ್ಷ ಪ್ರತಾಪರಾವ್ ಪಾಟೀಲ ಪುತ್ರನ ವಿರುದ್ಧ ಎಫ್‌ಐಆರ್
ಚಿಕ್ಕೋಡಿ:
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆ, ವೃದ್ಧರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ್ ಪಾಟೀಲ ಪುತ್ರ ಸೇರಿದಂತೆ ೧೧ ಜನರ ವಿರುದ್ದ ಎಫ್‌ಐಆರ್ ದಾಖಲಾಗಿದೆ.
ಇಟ್ನಾಳ ಗ್ರಾಮದ ನಿವಾಸಿ ಅಶ್ವಿನಿ ಸದಾಶಿವ ಡಂಗೆ ಮತ್ತು ರಾಮಪ್ಪ ಮುತ್ತಪ್ಪ ಡಂಗೆ ಹಲ್ಲೆಗೊಳಗಾಗಿದ್ದಾರೆ.
ಅ.೬ ರಂದು ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ಡಂಗೆ ಹಾಗೂ ಹೊನ್ನಳ್ಳಿ ಕುಟುಂಬದ ನಡುವೇ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಲಕ್ಷ್ಮಣ ಹೊನ್ನಳ್ಳಿ ಪರವಾಗಿ ಬಂದಂತ ಆರೋಪಿಗಳು ಗುಂಪು ಕಟ್ಟಿಕೊಂಡು ಮಹಿಳೆ ಹಾಗೂ ವೃದ್ಧರ ಮೇಲೆ ಮಾರಕಾಸ್ತçಗಳಿಂದ ಹಲ್ಲೆ ನಡೆಸಿ,ಪಿಸ್ತೂಲ ಹಿಡಿದು ಕೊಲೆಗೆ ಯತ್ನಿಸಿದ್ದಾರೆ, ಹಾಗೂ ಮನೆಯ ಮೆಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಶಿವರಾಜ ಪಾಟೀಲ ಸೇರಿದಂತೆ ೧೧ ಜನರ ಮೇಲೆ ಹಾಗೂ ಎದುರಾಳಿ ಲಕ್ಷ್ಮಣ ಹೊನ್ನಳ್ಳಿ ಕುಟುಂಬಸ್ಥರ ಮೇಲೆ ಹಲ್ಲೆಯಾಗಿದೆ ಎಂದು ೩೫ ಜನರ ವಿರುದ್ದ ಎಫ್‌ಐಆರ್ ದಾಖಲಾಗಿದೆ.