ಜೆಡಿಎಸ್ ಬೆಂಬಲಿತರ ಜಯಭೇರಿ

04.. Pyp.03
Published on

ಪಿರಿಯಾಪಟ್ಟಣ: ತಾಲೂಕಿನ ಹಿಟ್ಟನೇಹೆಬ್ಬಾಗಿಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಪ್ರಕ್ರಿಯೆಯಲ್ಲಿ ಜೆಡಿಎಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆಲವು ಸಾಧಿಸುವ ಮೂಲಕ ಜಯಭೇರಿ ಬಾರಿಸಿದ್ದಾರೆ.


ಸಂಘದ ಆಡಳಿತ ಮಂಡಳಿಯ ಒಟ್ಟು 12 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜೆಡಿಎಸ್ ಬೆಂಬಲಿತ 9 ನಿರ್ದೇಶಕರು ಹಾಗೂ ಕಾಂಗ್ರೆಸ್ ಬೆಂಬಲಿತ 3 ನಿರ್ದೇಶಕರು ಆಯ್ಕೆಯಾದರು.

ಎಚ್.ಎಸ್.ಕುಮಾರ್, ಎಚ್.ಸಿ.ಮಹದೇವ್, ಎಚ್.ಪಿ.ಅನಿಲ್ ಕುಮಾರ್, ಈರೇಗೌಡ, ಚಂದ್ರು, ಪಾರ್ವತಿ, ಕಾವೇರಮ್ಮ, ಎಚ್.ಎಂ.ವಿನೋದ್ ಕುಮಾರ್, ಎಚ್.ಡಿ.ಮಹದೇವ, ಮಹೇಶ್ ನಾಯಕ, ಎಚ್.ಕೆ.ಅಮೃತೇಶ್, ಕೆ.ಕೆ.ಹರೀಶ್ ಗೆಲುವು ಸಾಧಿಸಿದರು. ಚುನಾವಣೆ ಬಳಿಕ ನೂತನ ನಿರ್ದೇಶಕರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net