ಜೆಡಿಎಸ್ ನತ್ತ ನಾರ್ವೆ ಸೋಮಶೇಖರ್

ಜೆಡಿಎಸ್ ನತ್ತ ನಾರ್ವೆ ಸೋಮಶೇಖರ್
Published on

ಹಾಸನ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಲೂರು-ಸಕಲೇಶಪುರ - ಕಟ್ಟಾಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅಲ್ಪದರಲ್ಲಿ ಸೋಲು ಕಂಡ ನಾರ್ವೆ ಸೋಮಶೇಖರ್ ಮತ್ತೆ ಟಿಕೆಟ್ ವಂಚಿತರಾದ ಹಿನ್ನೆಲೆಯಲ್ಲಿ ಇದೀಗ ಅಚ್ಚರಿ ಎಂಬಂತೆ ಸಕಲೇಶಪುರ, ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಲು ನಿರ್ಧರಿಸಿದ್ದಾರೆ.

ಶಾಸಕ ಹೆಚ್.ಕೆ. ಕುಮಾರಸ್ವಾಮಿ ಅವರಿಗೆ 2018ರ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿ 4942 ಮತಗಳ ಅಂತರದಿಂದ ಪರಾಭವಗೊಂಡ ನಂತರ ಈ ಬಾರಿ ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧಿಸಲು ಸಾಷಕ್ಟು ತಯಾರಿ ನಡೆಸಿದ್ದರು. ಆದರೆ ಪಕ್ಷ ಸಿಮೆಂಟ್ ಮಂಜು ಅವರನ್ನು ಕಣಕ್ಕಿಳಿಸಿದ್ದರಿಂದ ಬೇಸರಗೊಂಡರು ಜೆಡಿಎಸ್ ಬೆಂಬಲಿಸಲಿದ್ದಾರೆ ಎಂದು ತಿಳಿದು.ಬಂದಿದೆ.

ಈ ಬಗ್ಗೆ ಕ್ಷೇತ್ರದಾದ್ಯಂತ ಭಾರೀ ಗುಸು ಗುಸುಗಳು ಕಳೆದ ಹಲವು ದಿನಗಳಿಂದ ಕೂಡ ಕೇಳಿಬರುತ್ತಿತ್ತು. ಆದರೆ ಇದಕ್ಕೆ ಪುಷ್ಠಿ ನೀಡುವಂತೆ ಶುಕ್ರವಾರ ಜೆಡಿಎಸ್ ಪ್ರಮುಖರೊಂದಿಗೆ ಹಲವು ತಾಸುಗಳ ಚರ್ಚೆ ನಡೆಸಿರುವ ಅವರು ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಕುರಿತು ಮಾತುಕತೆ ನಡೆಸಿದರು. ಸಂಜೆ ವೇಳೆಗೆ ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್.ದ್ಯಾವೇಗೌಡ ಅವರೊಂದಿಗೆ ಒಂದೇ ಕಾರಿನಲ್ಲಿ ತೆರಳಿದ ಅವರು ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಇತರರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು ಎನ್ನಲಾಗಿದೆ.

ಇದಲ್ಲದೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಸಂಸದ ಪ್ರಜಲ್ ರೇವಣ್ಣ ಮತ್ತು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಜೊತೆ ಚನ್ನರಾಯಪಟ್ಟಣ ತಾಲ್ಲೂಕಿನ ಘನ್ನೀಕಡ ಗ್ರಾಮದ ಫಾರಂ ಹೌಸ್ ನಲ್ಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಸಕಲೇಶಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಸಿಮೆಂಟ್ ಮಂಜು ಅವರೂ ಸಹ ಪ್ರೀತಂ ಗೌಡ ಅವರ ಸಹಕಾರದಿಂದಲೇ ಟಿಕೆಟ್ ಪಡೆದು ಸ್ಪರ್ಧಿಸಿರುವ ಕಾರಣ ಬಿಜೆಪಿ ಅಭ್ಯರ್ಥಿಗಳೇ ಇವರ ಟಾರ್ಗೆಟ್.ಕಳೆದ ಚುನಾವಣೆಯಲ್ಲಿ ಸಕಲೇಶಪುರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ನಾರ್ವೆ ಸೋಮಶೇಖರ್ ಅವರು ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದರು.

ಈ ಬಾರಿಯೂ ಬಿಜೆಪಿಯಿಂದ ಟಿಕೆಟ್ ಲಭಿಸುತ್ತದೆ ಎಂಬ ಎಂಬ ವಿಶ್ವಾಸದಲ್ಲಿದ್ದ ಅವರನ್ನು ಕಮಲ ವರಿಷ್ಠರು ಒಪ್ಪಲಿಲ್ಲ. ತಮ್ಮದೇ ಜಕೀಯ ಲೆಕ್ಕಾಚಾರದಲ್ಲಿದ್ದ ಪ್ರೀತಂ ಜೆ.ಗೌಡ ಅವರು ಸಿಮೆಂಟ್ ಮಂಜು ಅವರಿಗೆ ಟಿಕೆಟ್ ಕೊಡಿಸಿದರು. ಇದರಿಂದ ಇಬ್ಬರನ್ನೂ ಈ ಬಾರಿ ಸಓಲಿಸಲೆಬೇಕು ಎಂಬ ಕಾರಣಕ್ಕೆ ಜೆಡಿಎಸ್ ಅಭ್ಯರ್ಥಿಗಳನ್ನು ನಾರ್ವೆ ಸೋಮಶೇಖರ್ ಬೆಂಬಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ಮುಖಂಡ ಪಕ್ಷ ಸೇರ್ಪಡೆಯಾಗುವುದರಿಂದ ಜೆಡಿಎಸ್‌ಗೆ ಮತ್ತಷ್ಟು ಶಕ್ತಿ ಬಂದಂತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ನಿಜವೋ ಸುಳ್ಳೋ ಎಂಬುದನ್ನು ಜೆಡಿಎಸ್ ವರಿಷ್ಠರು ಅಥವಾ ನಾರ್ವೆ ಸೋಮಶೇಖರ್ ಅವರು ಬಹಿರಂಗಪಡಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net