ಜೆಡಿಎಸ್ ಅಧಿಕಾರಕ್ಕೆ ಬಂದರೆ ಯುವ ಚೈತನ್ಯ ಜಾರಿ

05M.D.R.1
ಮದ್ದೂರು ಪಟ್ಟಣದಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಅವರ ನೇತೃತ್ವದಲ್ಲಿ ನೂರಾರು ಯುವಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಮಾದನಾಯಕನಹಳ್ಳಿ ರಾಜಣ್ಣ, ಚಿಕ್ಕತಿಮ್ಮೇಗೌಡ, ಎಂ.ಐ.ಪ್ರವೀಣ್, ಸುರೇಶ್‌ಕುಮಾರ್, ನಗರಕೆರೆ ಸಂದೀಪ್, ಅರವಿಂದ್, ಪ್ರಸನ್ನಕುಮಾರ್ ಇದ್ದರು.
Published on

ಮದ್ದೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ಯುವ ಚೈತನ್ಯ ಯೋಜನೆಯನ್ನು ಜಾರಿಗೊಳಿಸಿ ಯುವ ಸಮೂಹಕ್ಕೆ ಹಲವು ರೀತಿಯ ಅನುಕೂಲಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಡಿ.ಸಿ.ತಮ್ಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ನೂರಾರು ಯುವಕರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯುವ ಜನಾಂಗಕ್ಕೆ ನೀಡಿದಷ್ಟು ಯೋಜನೆಗಳನ್ನು ಬೇರೆ ಯಾವ ಪಕ್ಷಗಳು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.
ಯುವ ಜನತೆ ಕೇವಲ ಕುಟುಂಬದ ಆಸ್ತಿ ಅಲ್ಲ, ದೇಶದ ಆಸ್ತಿ. ಉತ್ತಮ ಶಿಕ್ಷಣ ನೀಡುವ ಮೂಲಕ ದೇಶದ ಉತ್ತಮ ಪ್ರಜೆಗಳನ್ನಾಗಿ ನಿರ್ಮಿಸುವ ಮಹತ್ಕಾರ್ಯಕ್ಕೆ ಜೆಡಿಎಸ್ ಪಕ್ಷ ಮುಂದಾಗಿದ್ದು, ಯುವ ಜನತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಬೇಕೆಂದು. ಗ್ರಾಮೀಣ ಪ್ರದೇಶದ ಯುವ ಜನತೆಗೆ ಉನ್ನತ ಶಿಕ್ಷಣ ಕೊಡಿಸುವ ಜತೆಗೆ ಅವರಿಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಎಚ್.ಡಿ.ಕುಮಾರಸ್ವಾಮಿ ಅವರು ಯೋಜನೆಗಳನ್ನು ರೂಪಿಸಿದ್ದು, ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದು ಅಧಿಕಾರಕ್ಕೆ ಬಂದರೆ ಯುವ ಜನತೆ ಸೇರಿದಂತೆ ಹಾಗೂ ಸರ್ವರಿಗೂ ಅನುಕೂಲವಾಗುವ ಯೋಜನೆಗಳನ್ನು ಎಚ್.ಡಿ.ಕುಮಾರಸ್ವಾಮಿ ಅವರು ರೂಪಿಸಲಿದ್ದಾರೆ ಎಂದು ಹೇಳಿದರು. ಪ್ರಶಾಂತ್, ವರುಣ್, ಜ್ಯೋತಿ, ಕುಮಾರ್, ಗಂಗಾ, ಸಾಗರ್, ಪ್ರತಾಪ್, ಕಾರ್ತಿಕ್, ಕೀರ್ತಿ, ದೀಕ್ಷಿತ್, ಕುಶಾಲ್, ಜಯಂತ್, ರೇಣು, ನಿಖಿಲ್, ಮಾದು, ನಂದೀಶ್, ಮನು, ಸೇರಿದಂತೆ ನೂರಾರು ಯುವಕರು ಜೆಡಿಎಸ್ ಸೇರ್ಪಡೆಯಾದರು. ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಯುವ ಘಟಕದ ತಾಲೂಕು ಅಧ್ಯಕ್ಷ ಎಂ.ಐ.ಪ್ರವೀಣ್, ಕಾರ್ಯಾಧ್ಯಕ್ಷ ನಗರಕೆರೆ ಸಂದೀಪ್, ಉಪಾಧ್ಯಕ್ಷ ಗುರುದೇವರಹಳ್ಳಿ ಅರವಿಂದ್, ಪುರಸಭೆ ಅಧ್ಯಕ್ಷ ಸುರೇಶ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸದಸ್ಯರಾದ ಮಹೇಶ್, ವನಿತಾ, ಮುಖಂಡರಾದ ಕೂಳಗೆರೆ ಶೇಖರ್, ಪದ್ಮಹರೀಶ್, ಹೇಮಂತ್, ಸಾಗರ್, ದೀಪಕ್. ಚೇತನ್, ರಮೇಶ್, ರಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net