ಜೆಜೆಎಂ ಕಾಮಗಾರಿಗೆ ಸಹಕಾರ ನೀಡಿ

22kd01
Published on

ಕುಂದಗೋಳ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ ಮಿಷನ್ ಯೋಜನೆ ಮೂಲಕ ಮನೆ ಮನೆಗೂ ನೀರು ಪೂರೈಸಲಾಗುತ್ತಿದೆ. ಈ ಕಾಮಗಾರಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕá- ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.

ತಾಲೂಕಿನ ಹಿರೇಗುಂಜಳ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ 97 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ ಸಂಶಿ ಮಾತನಾಡಿದರು.

ಉಪಾಧ್ಯಕ್ಷೆ ರೇಖಾ ಯಳವತ್ತಿ, ಸದಸ್ಯರಾದ ದೇವಪ್ಪ ಅಣ್ಣಿಗೇರಿ, ಹೇಮಾವತಿ ಹಾಲಪ್ಪಗೌಡ್ರ, ಮಂಜುನಾಥ ದೊಡಮನಿ, ಗಂಗಾಧರ ದೊಡ್ಡಮನಿ, ಲಲಿತಾ ಸಣ್ಣಲಿಂಗಣ್ಣವರ, ನಾಗನಗೌಡ ನೆಗಳೂರ, ಮುಖಂಡರಾದ ಮಾಲತೇಶ ಶ್ಯಾಗೋಟಿ, ಚಂದ್ರಶೇಖರ ಬಿಸೆರೊಟ್ಟಿ, ಶಂಕ್ರಪ್ಪ ಹಡಪದ, ಪರಶುರಾಮ ಬಿಸೆರೊಟ್ಟಿ, ಧರ್ಮಗೌಡ್ರ ಹಾಲಪ್ಪಗೌಡ್ರ, ನಿಂಗಪ್ಪ ಹಳ್ಳಿಕೇರಿ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಹಾಯಕ ಅಧಿಕಾರಿ ಆಕಾಶ ವಂದೆ ಇದ್ದರು, ಪಿಡಿಒ ಬಿ.ಎನ್. ರಾಘವೇಂದ್ರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net