ಜೆಜೆಎಂ ಕಾಮಗಾರಿ ಗುಣಮಟ್ಟ ಕಾಪಾಡಿ

29 hbd 01
Published on

ಹುಮನಾಬಾದ್: ಕೆಲ ಗ್ರಾಮಗಳಲ್ಲಿ ನಡೆದಿರುವ ಜೆಜೆಎಂ ಕಾಮಗಾರಿ ಕಳಪೆ ಆಗಿವೆ ಎನ್ನುವ ದೂರು ಕೇಳಿ ಬರುತ್ತಿದ್ದು, ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಗ್ರಾಮಸ್ಥರು ನಿಗಾ ವಹಿಸಬೇಕು. ಗುತ್ತಿಗೆದಾರರು ಉತ್ತಮ ಕೆಲಸ ಮಾಡಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಕನಕಟ್ಟಾ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ೩.೩೬ ಕೋಟಿ ರೂ. ಅನುದಾನದಲ್ಲಿ ಕೈಗೊಳ್ಳುತ್ತಿರುವ ಕುಡಿಯುವ ನೀರು ಪೂರೈಕೆಯ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಜಲ ಜೀವನ ಮಿಷನ್ ಯೋಜನೆ ಅಡಿ ಪ್ರತಿ ಮನೆಗೂ ನೀರು ಪೂರೈಸುವ ಉz್ದೆÃಶ ಹೊಂದಲಾಗಿದೆ. ಕಾಮಗಾರಿ ಗುಣಮಟ್ಟ ನಿಗಾವಹಿಸುವುದು ಅವಶ್ಯ ಎಂದರು.
ಕಳಪೆ ಕಾಮಗಾರಿ ಕಂಡು ಬಂದರೆ ನನ್ನ ಅಥವಾ ಅಧಿಕಾರಿಗಳ ಗಮನಕ್ಕೆ ತಂದರೆ ಅಧಿಕಾರಿ, ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಗ್ರಾಪA ಅಧ್ಯಕ್ಷ ಮನೋಜ ಮಾನೆ, ಉಪಾಧ್ಯಕ್ಷ ಶಿವಕುಮಾರ, ಸದಸ್ಯರಾದ ಮೈನೋದ್ದಿನ್, ದಯಾನಂದ ಮೇತ್ರೆ, ರಾಮ ಶೇಕೋಬಾ, ಶಾಂತಮ್ಮ ವಾಡೇಕರ್, ದೀಪರಾಜ ಪಾಟೀಲ್, ಮಹೇಶ ಗಣಾಚಾರಿ, ಪ್ರಮುಖರಾದ ಮಲ್ಲಿಕಾರ್ಜುನ ಸಿಗಿ, ಮಲ್ಲಪ್ಪ ಬಳತೆ, ಸುರೇಶ ವಾಡೇಕರ್, ಶಹಾಜಿ ಬಿರಾದಾರ, ಗುಂಡುರಡ್ಡಿ ಪೋಲಕೆ, ಸುನೀಲ ಪತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net