

ಯಾದಗಿರಿ: ಜಿ¯್ಲÁ ಪಂಚಾಯಿತಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲೀಕರಣ ವಿಭಾಗದ ಯಾದಗಿರಿ, ಶಹಾಪುರ, ಸುರಪುರ ಉಪ ವಿಭಾಗಗಳ ಮೂಲಕ ಅನುಷ್ಠಾನಗೊಳಿಸುತ್ತಿರುವ ಜೆಜೆಎಂ ಯೋಜನೆಯಲ್ಲಿ ಬಹಳಷ್ಟು ಅವ್ಯವಹಾರ ನಡೆದಿದ್ದು, ಕೂಡಲೇ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಜಿ¯್ಲÁ ಘಟಕದ ನೇತೃತ್ವದಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಜಿ¯್ಲÁ ಪಂಚಾಯಿತಿ ಕಚೇರಿ ಎದುರಿಗೆ ಗುರುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾ ಸಂಚಾಲಕ ನಿಂಗಣ್ಣ ಎಂ.ಗೋನಾಲ್, ಜೆಜೆಎಂ ಯೋಜನೆಯ ಅವ್ಯವಹಾರದ ಬಗ್ಗೆ ಮಾರ್ಚï ತಿಂಗಳ¯್ಲೆÃ ದೂರು ನೀಡಿದ್ದರೂ, ಇದುವರೆಗೆ ಯಾವುದೇ ಕ್ರಮ ಜರುಗಿಸದೆ ಹುಸಿ ಭರವಸೆ ನೀಡಲಾಗಿದೆ. ೫೭೬.೩೧ ಕೋಟಿ ಅನುದಾನದಲ್ಲಿ ೬೯೫ ಕಾಮಗಾರಿಗಳು ಕೈಗೊಳ್ಳಲಾಗುತ್ತಿದ್ದು, ೨೩೫.೪೭ ಕೋಟಿ ರೂಪಾಯಿ ಖರ್ಚಾಗಿದೆ ಎಂದು ದಾಖಲೆಗಳಿವೆ. ಆದರೆ, ಜೆಜೆಎಂ ಯೋಜನೆಯಲ್ಲಿ ಬಹಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಶುದ್ಧ ಕುಡಿಯುವ ನೀರು ಒದಗಿಸುವ ಮಹಾತ್ವಾಕಾಂಕ್ಷೆ ಜೆಜೆಎಂ ಯೋಜನೆಯ ಹಣ ಭ್ರಷ್ಟರ ಪಾಲಾಗಿದ್ದು, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಿ ನಿಯಮಾನುಸಾರ ಕ್ರಮ ಜರುಗಿಸಬೇಕು. ಈ ಕುರಿತು ಉನ್ನತ ಮಟ್ಟದ ತನಿಖಾ ತಂಡ ನೇಮಿಸಿ ಕಾನೂನು ಕ್ರಮ ಜರುಗಿಸಬೇಕು ಅವರು ಆಗ್ರಹಿಸಿದರು. ಜಿ¯್ಲÁ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗೆ ಮನವಿ ಸಲ್ಲಿಸಿದರು. ಸಂಘಟನೆಯ ಪದಾಧಿಕಾರಿಗಳಾದ ಟಿ.ರಂಗನಾಥ, ಸದಾಶಿವ ಬೊಮ್ಮನಳ್ಳಿ, ಹಣಮಂತ ಕಟ್ಟಿಮನಿ, ಹೆಚï.ಆರï.ಬಡಿಗೇರ, ರಾಮಪ್ಪ ಕೊರೆ ಹಾಗೂ ಕಾರ್ಯಕರ್ತರಾದ ನಿಂಗಪ್ಪ, ಬಸವರಾಜ, ಭೀಮಣ್ಣ, ಅನೀಲ, ಶಿವಣ್ಣ ಇತರರಿದ್ದರು.