

ಮೈಸೂರು: ಟಯರ್ ತಯಾರಿಸುವ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಜೆಕೆ ಟಯರ್ ಆ್ಯಂಡ್ ಇಂಡಸ್ಟ್ರೀಸ್ ಲಿಮಿಟೆಡ್ ಜೂನ್ 30ಕ್ಕೆ ಕೊನೆಗೊಂಡ 2025-26ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 155 ಕೋಟಿ ರೂ. ಮೊತ್ತದ ನಿವ್ವಳ ಲಾಭ ಗಳಿಸಿದೆ.
ಲೆಕ್ಕಪರಿಶೋಧಿಸದ ಹಣಕಾಸು ಫಲಿತಾಂಶಗಳನ್ನು ಶನಿವಾರ ಪ್ರಕಟಿಸಲಾಗಿದೆ. ಈ ಹಣಕಾಸು ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಡಾ.ರಘುಪತಿ ಸಿಂಘಾನಿಯಾ ಅವರು, ದೇಶೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಯ ವೇಗವು ಮೊದಲ ತ್ರೈಮಾಸಿಕದಲ್ಲಿ ಸದೃಢವಾಗಿ ಉಳಿದಿದ್ದು, ಕಂಪನಿಯು ವರ್ಷದಿಂದ ವರ್ಷಕ್ಕೆ ಶೇ.11ರಷ್ಟು ಮಾರಾಟದ ಬೆಳವಣಿಗೆ ಸಾಧಿಸಿದೆ ಎಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬದಲಿಸುವ ಮತ್ತು ಒಇ ವಿಭಾಗಗಳಲ್ಲಿ ನಮ್ಮ ಉತ್ಪನ್ನಗಳಿಗೆ ಇರುವ ಸುಸ್ಥಿರ ಬೇಡಿಕೆಯು ಟಯರ್‌ಗಳ ಮಾರಾಟ ಹೆಚ್ಚಿಸಿದೆ. ಇದು ಜೆಕೆ ಟಯರ್‌ನ ಪ್ರಮುಖ ಬೆಳವಣಿಗೆಯ ಚಾಲಕ ಶಕ್ತಿಗಳ ಮೇಲೆ ನಿರಂತರ ಗಮನ ಕೇಂದ್ರೀಕರಿಸಿರುವ ಮತ್ತು ಮಾರುಕಟ್ಟೆ ಬಲಪಡಿಸಲು ಆದ್ಯತೆ ನೀಡಿರುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ
ಸವಾಲಿನ ಮತ್ತು ಅನಿಶ್ಚಿತ ಆರ್ಥಿಕ ಪರಿಸ್ಥಿತಿಯ ಹೊರತಾಗಿಯೂ ಕಾರ್ ಟಯರ್‌ಗಳ ರಫ್ತು ತ್ರೈಮಾಸಿಕದಿಂದ ತ್ರೈಮಾಸಿಕ ಮತ್ತು ವರ್ಷದಿಂದ ವರ್ಷದ ಆಧಾರದ ಮೇಲೆ ಗಮನಾರ್ಹ ಹೆಚ್ಚಳ ಕಂಡಿದೆ. ಇದು ನಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿರುವ ಬ್ರ್ಯಾಂಡ್ ಗ್ರಹಿಕೆಯನ್ನು ಸೂಚಿಸುತ್ತದೆ ಎಂದಿದ್ದಾರೆ.
ನೈಸರ್ಗಿಕ ರಬ್ಬರ್ ಬೆಲೆಗಳು ಹೆಚ್ಚಿದ್ದರೂ ಕಾರ್ಯಾಚರಣೆಯ ಸುಧಾರಣೆಗಳು ಮತ್ತು ಕಾರ್ಯತಂತ್ರದ ಬೆಲೆ ನಿಗದಿಯಿಂದಾಗಿ ಕ್ರೋಡೀಕೃತ ಇಬಿಐಟಿಡಿಎ ಶೇ.10ರಷ್ಟು ಹೆಚ್ಚಳಗೊಂಡು 424 ಕೋಟಿ ರೂ.ಗೆ ತಲುಪಿದೆ. ತೆರಿಗೆ ಪಾವತಿ ನಂತರದ ಲಾಭ(ಪಿಎಟಿ) 155 ಕೋಟಿ ರೂ. ಆಗಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.51ರಷ್ಟು ಹೆಚ್ಚಾಗಿದೆ. ಎರಡೂ ಅಂಗಸಂಸ್ಥೆಗಳಾದ ಕ್ಯಾವೆಂಡಿಷ್ (ಭಾರತ) ಮತ್ತು ಟೋರ್ನೆಲ್ (ಮೆಕ್ಸಿಕೊ) ಕಂಪನಿಯ ಒಟ್ಟಾರೆ ವಹಿವಾಟು ಹಾಗೂ ವರಮಾನಕ್ಕೆ ಗಮನಾರ್ಹ ಕೊಡುಗೆ ನೀಡುವುದನ್ನು ಮುಂದುವರಿಸಿವೆ.
ಜೆಕೆ ಟಯರ್ ಪರಿಸರ ಸಂರಕ್ಷಣೆಯ ಜವಾಬ್ದಾರಿಯುತ ಮತ್ತು ನಾವೀನ್ಯತೆ ಆಧಾರಿತ ಕಂಪನಿಯಾಗಿದ್ದು, ಸುಸ್ಥಿರತೆಯು ವಹಿವಾಟಿನ ಕಾರ್ಯತಂತ್ರದ ಮುಖ್ಯ ತಿರುಳಾಗಿದೆ. ಟಯರ್ ಉದ್ಯಮದ ಬೆಳವಣಿಗೆಯು ಪರಿಸರದ ಮೇಲೆ ಕಡಿಮೆ ಪ್ರಭಾವ ಬೀರುವ, ಟಯರ್‌ಗಳ ಮರುಬಳಕೆ ಹಾಗೂ ಹಳೆಯ ಟಯರ್‌ಗಳ ಮೇಲೆ ಹೊಸ ಚಕ್ರದ ಹೊರಮೈ ಹಾಕಿ ಮರುಬಳಕೆ ಮಾಡುವ(ಆರ್‌ಸಿಡಿ) ಉಪಕ್ರಮಗಳ ಮೂಲಕ ಕಂಪನಿಯು ಸುಸ್ಥಿರ ನಾವೀನ್ಯತೆ ಮುನ್ನಡೆಸುತ್ತಿದೆ.
ವಸ್ತು ವಿಜ್ಞಾನದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಜೈವಿಕ ಮೂಲದ ಮತ್ತು ಮರುಬಳಕೆಯ ವಸ್ತುಗಳಿಂದ ಹಗುರವಾದ, ಗಟ್ಟಿಯಾದ ಟಯರ್ ತಯಾರಿಸಲಾಗುತ್ತಿದೆ. ಇದರ ಜತೆಗೆ ಅತ್ಯುತ್ತಮ ಕಾರ್ಯಕ್ಷಮತೆ ಮಾನದಂಡವನ್ನು ಜೆಕೆ ಟಯರ್ ಖಚಿತಪಡಿಸಿಕೊಳ್ಳುತ್ತದೆ.