

ಚಾಮರಾಜನಗರ: ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹಾಗೂ ಸದೃಢ ವ್ಯಕ್ತಿತ್ವವನ್ನು ರೂಪಿಸಿ, ಅವರಲ್ಲಿ ಕಲಿಕೆಯ ಅಸಕ್ತಿಯನ್ನು ಮೂಡಿಸುವುದು ಅಕ್ಷರ ಯಾತ್ರೆಯ ಮುಖ್ಯ ಉದ್ದೇಶ ಎಂದು ಬೀದರ್ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ್ ಪಾಟೀಲ್ ತಿಳಿಸಿದರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಜೆಎಸ್‌ಎಸ್ ಮಹಾವಿದ್ಯಾ ಪೀಠ, ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜು ಹಾಗೂ ಬೀದರ್ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ವತಿಯಿಂದ ಬುಧವಾರ ಆಯೋಜಿಸಿದ್ದ ಅಕ್ಷರ ಜ್ಯೋತಿ ಯಾತ್ರೆ-2024 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಕ್ಷರ ಯಾತ್ರೆಯ ಮುಖಾಂತರ ವ್ಯಕ್ತಿತ್ವ ವಿಕಸನದ ಬಗ್ಗೆ ಮಾರ್ಗದರ್ಶನ ನೀಡುವ ಜತೆಗ ಫಲಿತಾಂಶ ಸುಧಾರಣೆಯ ಮಾರ್ಗೋಪಾಯಗಳನ್ನು ಮನವರಿಕೆ ಮಾಡಿಕೊಟ್ಟು ಸುಸಂಸ್ಕೃತಿ ನಾಗರಿಕರನ್ನಾಗಿ ರೂಪಿಸುವ ಆಶಯ ನಮ್ಮದಾಗಿದೆ ಎಂದರು.
ನಗರಭೆ ಅಧ್ಯಕ್ಷ ಸುರೇಶ್ ಮಾತನಾಡಿ, ವಿದ್ಯಾರ್ಥಿ ಜೀವನ ಗೋಲ್ಡನ್ ಲೈಫ್. ಈ ಸಂದರ್ಭದಲ್ಲಿ ತಾವೆಲ್ಲರು ಕಷ್ಟಪಟ್ಟ ವ್ಯಾಸಂಗ ಮಾಡುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದರು. ರೋಟರಿ ಸಿಲ್ಕ್‌ಸಿಟಿ ಸಹಾಯಕ ಪ್ರಾಂತಪಾಲ ದೊಡ್ಡರಾಯಪೇಟೆ ಗಿರೀಶ್ ಮಾತನಾಡಿದರು. ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಮಹದೇವಸ್ವಾಮಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವರಾಜಮೂರ್ತಿ, ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿ ಶಿವಾಜಿರಾವ್ ಮಾನೆ, ಉಪನ್ಯಾಸಕರಾದ ಉಮಾಪತಿ, ಮಹದೇವಸ್ವಾಮಿ ಮತ್ತು ಇತರರು ಇದ್ದರು.