ಜೆಎಸ್‌ಎಸ್‌ನ 800 ಮಕ್ಕಳು ವಿಜಯಾನಂದ ವೀಕ್ಷಣೆ

222222222
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ವಿಜಯಾನಂದ ಚಿತ್ರ ಜನಮೆಚ್ಚುಗೆ ಗಳಿಸಿದೆ. ಈ ಚಿತ್ರವು ವಿದ್ಯಾರ್ಥಿಗಳಿಗೆ ಸೂರ್ತಿಯಾಗಲಿ ಎಂಬ ಉದ್ದೇಶದಿಂದ ನಗರದ ವಿದ್ಯಾಗಿರಿ ಜೆಎಸ್‌ಎಸ್ ಸಂಸ್ಥೆಯ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಗುರುವಾರ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಿತ್ತು.
ಶಾಲೆಯ ೭, ೮ ಮತ್ತು ೯ನೇ ತರಗತಿಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೆಳಗಿನ ಪ್ರದರ್ಶನದಲ್ಲಿ ಚಿತ್ರ ವೀಕ್ಷಿಸಿದರು. ಅವರೊಂದಿಗೆ ೨೫ಕ್ಕೂ ಹೆಚ್ಚು ಶಿಕ್ಷಕರಿಯರೂ ಚಿತ್ರ ನೋಡಿದರು. ಡಾ. ಸಂಕೇಶ್ವರ ಅವರ ಜೀವನದ ಏಳುಬೀಳುಗಳು ಮತ್ತು ಲಾರಿ ಉದ್ಯಮವನ್ನು ದೇಶಾದ್ಯಂತ ವಿಸ್ತರಿಸಿದ ಸಾಧನೆಯನ್ನು ವಿದ್ಯಾರ್ಥಿಗಳು ಮೆಚ್ಚಿದರು.
ಡಾ. ವಿಜಯ ಸಂಕೇಶ್ವರ ಅವರ ಜೀವನ ಮತ್ತು ಸಾಧನೆ ಪ್ರೇರಣಾದಾಯಕ. ಅವರ ಜೀವನಾಧಾರಿತವಿಜಯಾನಂದ' ಚಿತ್ರ ಯುವ ಉದ್ಯಮಿಗಳಿಗೆ ಸೂರ್ತಿದಾಯಕ. ಇದೇ ಉದ್ದೇಶದಿಂದ ೩ ತರಗತಿಗಳ ಮಕ್ಕಳಿಗೆ ಚಿತ್ರ ವೀಕ್ಷಣೆ ವ್ಯವಸ್ಥೆ ಮಾಡಲಾಗಿತ್ತು. ಚಿತ್ರ ವೀಕ್ಷಿಸಿದ ವಿದ್ಯಾರ್ಥಿಗಳಲ್ಲಿ ತಾವೂ ಏನಾದರೊಂದು ಸಾಽಸಬೇಕು ಎಂಬ ಛಲದ ಮೊಳಕೆಯೊಡೆದಿದೆ. ನಾನೂ ಚಿತ್ರ ವೀಕ್ಷಿಸಿದ್ದು, ಉತ್ತಮವಾಗಿ ಮೂಡಿಬಂದಿದೆ ಎಂದು ಜೆಎಸ್‌ಎಸ್ ಸೆಂಟ್ರಲ್ ಸ್ಕೂಲ್ ಪ್ರಾಚಾರ್ಯೆ ಸಾಧನಾ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net