

ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿಯ ಕುಸುಗಲ್‌ನ ವೇದ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಏರ್ಪಡಿಸಿದ್ದ 2024- 25ನೇ ಸಾಲಿನ ಶಾಲಾ ಓಲಿಂಪಿಕ್ ಅಥ್ಲೆಟಿಕ್ ಮೀಟ್‌ನಲ್ಲಿ ನಗರದ ವಿದ್ಯಾಗಿರಿ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸಿಬಿಎಸ್‌ಇ ಶಾಲೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.
ಶಾಲೆಯ 17 ವರ್ಷದೊಳಗಿನ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾಗಿ ಬಂಗಾರದ ಪದಕ ಪಡೆದಿದ್ದಾರೆ. ಉದ್ದಜಿಗಿತದಲ್ಲಿ ಗ್ಲೋರಿಯಾ ಮುರ್ತೋಟಿ ಮತ್ತು ಸಾಕೀಬ್ ಕಾದೀಮ್ ಪ್ರಥಮ ಸ್ಥಾನ ಪಡೆದಿದ್ದಾರೆ. ಎತ್ತರ ಜಿಗಿತದಲ್ಲಿ ಮೇಘರಾಜ ಕುಸುಗಲ್ ಮತ್ತು ನಿಶಿತಾ ಕವಲೂರು ಪ್ರಥಮ, ಶಾಟ್‌ಪುಟ್‌ನಲ್ಲಿ ಸಿಂಚನಾ ಹಿರೇಮಠ ಪ್ರಥಮ ಸ್ಥಾನ ಪಡೆದಿದ್ದಾಳೆ.
14 ವರ್ಷದೊಳಗಿನ ಟೇಬಲ್ ಟೆನ್ನಿಸ್‌ನಲ್ಲಿ ಗಗನ್ ಮತ್ತು ಸುದರ್ಶನ ಹಾಗೂ ಬಾಲಕಿಯರಾದ ಶ್ರೀಜಾ ಮತ್ತು ಸೂನಲ್ ಪ್ರಥಮ ಸ್ಥಾನ ಪಡೆದಿದ್ದಾರೆ. 17 ವರ್ಷದೊಳಗಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ರನ್ನರ್‌ಆಪ್ ಆಗಿ ಬೆಳ್ಳಿ ಪದಕದೊಂದಿಗೆ ಶಾಲೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಜೆಎಸ್‌ಎಸ್‌ನ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್, ಪ್ರಾಚಾರ್ಯೆ ಸಾಧನಾ ಎಸ್., ಮಹಾವೀರ ಉಪಾದ್ಯೆ, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ಇದ್ದರು.