

ಗುಂಡ್ಲುಪೇಟೆ: ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜಿಗೆ 4ನೇ ಆವೃತ್ತಿಯ ನ್ಯಾಕ್ ಮಾನ್ಯತೆ ಮೌಲ್ಯಮಾಪನದಲ್ಲಿ ಬಿ+ ಶ್ರೇಣಿ (ಸಿಜಿಪಿಎ 2.71) ಮಾನ್ಯತೆ ಬಂದಿದೆ.
ಡಿ.18 ಹಾಗೂ 19ರಂದು ಭೂಪಾಲ್‌ನ ಪಿಎಸ್‌ಎಸ್ ಸೆಂಟ್ರಲ್ ಇನ್ಟ್ಸಿಟ್ಯೂಟ್ ಆಫ್ ಒಕೆಸೇನಲ್ ಎಜುಕೇಷನ್, ಎನ್‌ಸಿಇಆರ್‌ಟಿ ಪ್ರಾಧ್ಯಾಪಕ ಡಾ. ರವೀಂದ್ರಕುಮಾರ್ ಶುಕ್ಲ ಅರ ಅಧ್ಯಕ್ಷತೆಯಲ್ಲಿ ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಪ್ರಕಾಶ್‌ಚಂದ್ರ ಪಟ್ಟನಾಯಕ್ ಹಾಗೂ ಮಹಾರಾಷ್ಟ್ರದ ಬಲ್‌ಬೀಮ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ವಸಂತ್ ಸನಪ್‌ರ ನ್ಯಾಕ್ ಮೌಲ್ಯಮಾಪನ ಸಮಿತಿ ಕಾಲೇಜಿಗೆ ಭೇಟಿ ನೀಡಿ ಪರಾಮರ್ಶೆ ನಡೆಸಿತ್ತು.
ಸುತ್ತೂರು ಮಠ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾಲೇಜಿನ ಐಕ್ಯೂಎಸಿ, ಅಧ್ಯಾಪಕರು ಹಾಗೂ ಅಧ್ಯಾಪಕೇತರ ವರ್ಗದ ಪರಿಶ್ರಮದಿಂದ ಕಾಲೇಜಿಗೆ ಬಿ+ ಶ್ರೇಣಿ (ಸಿಜಿಪಿಎ 2.71) ಮಾನ್ಯತೆ ಬಂದಿದೆ ಎಂದು ಪ್ರಾಂಶುಪಾಲರಾದ ಡಾ.ಪಿ.ಮಹದೇವಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.