ಜೆಎಸ್‌ಎಸ್ ಎಸ್‌ಎಂಪಿಯು ಕಾಲೇಜ್ ಸಾಧನೆ

1 LIKHITA_S__KADABARAGI
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ದ್ವಿತೀಯ ಪಿಯು ಪರೀಕ್ಷೆಯಲ್ಲಿ ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಫಲಿತಾಂಶ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಲಿಖಿತಾ ಕಡಬರ್ಗಿ ಶೇ. 93.66 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ. ವೀಣಾ ಮಡಿವಾಳರ ಶೇ. 92.16 ದ್ವಿತೀಯ, ಭೀಮಾಶಂಕರ ಸಾಗರ ಶೇ. 89.83 ಅಂಕಗಳೊAದಿಗೆ ತೃತೀಯ ಸ್ಥಾನ ಪಡೆದಿದ್ದಾನೆ.

ವಾಣಿಜ್ಯ ವಿಭಾಗದಲ್ಲಿ ರಕ್ಷಿತಾ ಚೌಕಿಮಠ ಶೇ. 97 ಪ್ರಥಮ, ರಚನಾ ಕಾಶನವರ ಶೇ. 96.83 ದ್ವಿತೀಯ, ಸಮೀನಾ ಇನಾಮದಾರ ಶೇ. 95.16 ತೃತೀಯ ಸ್ಥಾನ ಪಡೆದಿದ್ದಾಳೆ.

ವಿಜ್ಞಾನ ವಿಭಾಗದಲ್ಲಿ ಪ್ರೀತಿ ಮಜ್ಜಿಗುಡ್ಡ ಶೇ. 94.50 ಪ್ರಥಮ, ಸೃಷ್ಟಿ ಪಾಟೀಲ ಶೇ. 93.66 ದ್ವಿತೀಯ, ತನುಶ್ರೀ ಕೊಂಗಿ ಶೇ. 91.83 ತೃತೀಯ ಹಾಗೂ ರಮೇಶ ಕುಸಗುರ ಶೇ. 91.50 ಅಂಕ ಪಡೆದು ಚತುರ್ಥ ಸ್ಥಾನ ಪಡೆದಿದಿದ್ದಾನೆ. ವಿದ್ಯಾರ್ಥಿಗಳ ಸಾಧನೆಯನ್ನು ಜೆಎಸ್‌ಎಸ್ ಕಾರ್ಯಾಧ್ಯಕ್ಷ ಡಾ. ಡಿ ವೀರೇಂದ್ರ ಹೆಗ್ಗಡೆ, ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಆಡಳಿತ ಮಂಡಳಿ ಮತ್ತು ಬೋಧಕ ಸಿಬ್ಬಂದಿ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net