ಜೆಎಸ್ಎಸ್ ಆಸ್ಪತ್ರೆಗೆ ಸಂಚಾರಿ ಚಿಕಿತ್ಸಾ ವಾಹನ ಕೊಡುಗೆ

4
Published on

ಮೈಸೂರು: ಬೆಂಗಳೂರಿನ ಲಯನ್ಸ್ ಸಂಸ್ಥೆ ಜ್ಞಾನಾಲಯದಿಂದ ಜೆಎಸ್‌ಎಸ್ ಆಸ್ಪತ್ರೆಗೆ ಸುಸಜ್ಜಿತ ಅತ್ಯಾಧುನಿಕ ‘ಸಂಚಾರಿ ಚಿಕಿತ್ಸಾ ಘಟಕ’ ವಾಹನವನ್ನು ಕೊಡುಗೆಯಾಗಿ ನೀಡಲಾಯಿತು.
ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಸ್ಪತ್ರೆಗೆ ವಾಹನ ಹಸ್ತಾಂತರಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಕಾರ್ಯದರ್ಶಿಗಳಾದ ಎಸ್.ಪಿ.ಮಂಜುನಾಥ್, ಶಿವಕುಮಾರಸ್ವಾಮಿ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಅಧಿಕಾರಿಗಳಾದ ಡಾ.ಬಿ.ಮಂಜುನಾಥ, ಡಾ.ಸುಮಾ, ಆರ್. ಮಹೇಶ್, ಜೆಎಸ್‌ಎಸ್ ಆಸ್ಪತ್ರೆಯ ಅಧಿಕಾರಿಗಳಾದ ಡಾ.ಸಿ.ಪಿ.ಮಧು, ಡಾ.ಶ್ಯಾಮಪ್ರಸಾದ್‌ಶೆಟ್ಟಿ, ಕೆ.ಎಂ.ಭಗವಾನ್, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಜ್ಞಾನಾಲಯದ ಶಿವಕುಮಾರ್, ಮಾದಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net