

ಮೈಸೂರು: ಜೆಎಸ್‌ಎಸ್ ವಿದ್ಯಾಸಂಸ್ಥೆಗಳು ಪ್ರತಿ ವರ್ಷ ಹೊರ ತರುವ ಶೈಕ್ಷಣಿಕ ವರ್ಷದ ಸಂಚಿಕೆಗಳಿಗೆ ಡಾ. ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ ಅಂಗವಾಗಿ ಪ್ರಶಸ್ತಿ ಘೋಷಿಸಲಾಗಿದೆ.
2021-22ನೇ ಸಾಲಿನ ಸ್ಪರ್ಧೆಗೆ ಸಂಸ್ಥೆಗಳಿಂದ ಬಂದಿದ್ದ ಸಂಚಿಕೆಗಳನ್ನು ಸಮಿತಿಯು ಪರಿಶೀಲಿಸಿ ಒಟ್ಟು 9 ಸಂಸ್ಥೆಗಳಿಗೆ ಬಹುಮಾನ ನೀಡಲಾಗಿದೆ. ಪ್ರಥಮ ಬಹುಮಾನಕ್ಕೆ ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಸಂಚಿಕೆ ‘ಸಾಮರ್ಥ್ಯ’, ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸಂಚಿಕೆ ‘ಪ್ರತಿಭಾ’, ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜಿನ ಸಂಚಿಕೆ ‘ಸಿಂಚನ’ ಆಯ್ಕೆಯಾಗಿವೆ.
ದ್ವಿತೀಯ ಬಹುಮಾನವನ್ನು ಶ್ರೀಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ‘ಜೇಜೀನ್’, ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ‘ಸುವರ್ಣ’ , ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜಿನ ‘ಹೊಂಬಾಳೆ’ ಪಡೆದುಕೊಂಡಿವೆ.
ತೃತೀಯ ಬಹುಮಾನಕ್ಕೆ ಊಟಿಯ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ‘ಫಾರ್ಮಸಾಗ’, ಗುಂಡ್ಲುಪೇಟೆಯ ಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ‘ನೆನಪಿನಂಗಳ’, ಕೊಳ್ಳೇಗಾಲದ ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್‌ನ ‘ಆರೈಕೆ’ ಸಂಚಿಕೆಗಳು ಆಯ್ಕೆಯಾಗಿವೆ. ಬಹುಮಾನ ಪಡೆದವರಿಗೆ ಆ.29ರಂದು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಆಯೋಜಿಸಿರುವ ಡಾ. ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ 108ನೇ ಜಯಂತಿ ಮಹೋತ್ಸವದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಜೆಎಸ್‌ಎಸ್ ವಿದ್ಯಾಪೀಠದ ಪ್ರಕಟಣಾ ವಿಭಾಗ ಹೇಳಿಕೆಯಲ್ಲಿ ತಿಳಿಸಿದೆ.