

ಹಾಸನ: ಜೆಇಇ ಮೈನ್ಸ್- 2025 ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನಗರದ ಮಾಸ್ಟರ್ಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆ ಹಾಗು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ಜಿ. ಕಿಶನ್ 99.899 ಪರ್ಸೆಂಟೈಲ್ ಪಡೆದು ಜಿಲ್ಲೆಗೆ ಪ್ರಥಮ ಹಾಗೂ ರಾಷ್ಟ್ರ ಮಟ್ಟದಲ್ಲಿ ಕೆಟಗರಿ 138ನೇ ರ‌್ಯಾಂಕ್ ಪಡೆದಿದ್ದಾರೆ. ಪ್ರೀತಮ್ ವೈ ಆರಾಧ್ಯ 99.332 ಪರ್ಸೆಂಟೈಲ್, ಎನ್.ಜೆ. ಪ್ರಣತಿ 98.952 ಪರ್ಸೆಂಟೈಲ್, ಬಿ.ಎಸ್.ಹರಿಪ್ರಸಾದ್ 98.206 ಪರ್ಸೆಂಟೈಲ್, ಸಿಂಚನಾ ಜೀವನ್ಗಿ 98.08 ಪರ್ಸೆಂಟೈಲ್ ಸೇರಿದಂತೆ 78 ವಿದ್ಯಾರ್ಥಿಗಳು ಅತ್ಯುತ್ತಮ ಪರ್ಸೆಂಟೈಲ್ ಪಡೆದು ಜೆಇಇ( ಅಡ್ವಾನ್ಸ್) ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.