ಜೆಇಇ ಮೈನ್ಸ್‌ನಲ್ಲಿ ಎಸ್‌ಆರ್‌ಎಸ್ ದಾಖಲೆ

SRS
Published on

ಚಿತ್ರದುರ್ಗ: ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಜೆಇಇ) ಮೈನ್ಸ್‌ನ 2ನೇ ಸ್ಲಾಟ್ ಪರೀಕ್ಷೆಯಲ್ಲಿ ಆಲ್ ಇಂಡಿಯಾ ರ್ಯಾಂಕ್ ಪಡೆಯುವ ಮೂಲಕ ನಗರದ ಎಸ್‌ಆರ್‌ಎಸ್ ಸಂಸ್ಥೆಯ ವಿದ್ಯಾರ್ಥಿಗಳು ದಾಖಲೆ ನಿರ್ಮಿಸಿದ್ದಾರೆ.

ಎಸ್‌ಆರ್‌ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಎನ್.ಮದನ್ ಶೇ 99.12 ಅಂಕ ಗಳಿಕೆಯೊಂದಿಗೆ ರಾಷ್ಟ್ರಮಟ್ಟದಲ್ಲಿ 339ನೇ ರ್ಯಾಂಕ್ ಪಡೆದು ಹೊಸ ದಾಖಲೆ,ಪಿ.ಟಿ.ಸೃಜನ್ ಹಾಗೂ ಜೆ.ರೋಹಿಣಿ ಕ್ರಮವಾಗಿ 629, 739ನೇ ರ್ಯಾಂಕ್ ಪಡೆದು ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

52 ವಿದ್ಯಾರ್ಥಿಗಳ ಪೈಕಿ 43 ಮಂದಿ ಶೇ 90ಕ್ಕಿಂತ ಹೆಚ್ಚು ಅಂಕ ಪಡೆದು ಕಾಲೇಜಿನ ಘನತೆ ಇಮ್ಮಡಿಗೊಳಿಸಿದ್ದಾರೆ. ಒಟ್ಟು 78 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಅರ್ಹತೆ ಪಡೆದಿದ್ದಾರೆ.

ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ನಮ್ಮ ಸಂಸ್ಥೆಗೆ ಅತ್ಯುತ್ತಮ ರ್ಯಾಂಕ್‌ಗಳು ಬಂದಿರುವುದು ಕಾಲೇಜಿನ ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದೆ.ಸಿಬ್ಬಂದಿ ನೀಡಿದ ತರಬೇತಿ ಪಡೆದು ವಿದ್ಯಾರ್ಥಿಗಳು ಸಾಧನೆಗೈದಿರುವುದು ಹೆಮ್ಮೆಯ ಸಂಗತಿ ಎಂದರು.

ಸಾಧಕ ವಿದ್ಯಾರ್ಥಿಗಳ ಸಾಲಿಗೆ ಸೇರುವ ಪ್ರಯತ್ನಕ್ಕೆ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಶ್ರಮಿಸಬೇಕು. ಪಿಯು ಅವಧಿಯಲ್ಲಿ ಎರಡು ವರ್ಷ ಕಷ್ಟಪಟ್ಟರೆ, ಸುಂದರ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.

ನಮ್ಮ ಪಿಯು ಕಾಲೇಜು ಜೆಇಇ ಮೈನ್ಸ್ ಮತ್ತು ಅಡ್ವಾನ್ಸ್ ವಿದ್ಯಾರ್ಥಿಗಳಿಗಾಗಿ ವಿಶೇಷ ಸ್ಟಾರ್ ಬ್ಯಾಚ್ ಹೊಂದಿದ್ದು, ಜೆಇಇ ಪರಿಣಿತ ಉಪನ್ಯಾಸಕರ ಮಾರ್ಗದರ್ಶನ ನೀಡಲಾಗುತ್ತಿದೆ. ಉತ್ತರ ಭಾರತ, ಹೈದರಾಬಾದ್‌ನ ವಿಷಯ ತಜ್ಞರು ಪೂರ್ಣ ಪ್ರಮಾಣದಲ್ಲಿ ಲಭ್ಯವಿದ್ದು, ಸಮಯೋಚಿತ ತರಬೇತಿಕೊಡುತ್ತಿದ್ದಾರೆ. ಈ ಭಾಗದ ಜೆಇಇ ಅಕಾಂಕ್ಷಿಗಳಿಗೆ ಇದು ಆಶಾದಾಯಕ ಬೆಳವಣಿಗೆಯಾಗಿದ್ದು, ಸಂಸ್ಥೆ ಗುಣಾತ್ಮಕ ತರಬೇತಿಗೆ ಒತ್ತು ನೀಡಿದೆ ಎಂದರು.

2022-23ನೇ ಸಾಲಿನ ಫಲಿತಾಂಶ ಅತ್ಯುತ್ತಮವಾಗಿದ್ದು, ನಮ್ಮ ಕಾಲೇಜಿನ ಒಟ್ಟು 8 ವಿದ್ಯಾರ್ಥಿಗಳು ಐಐಟಿ, ಐಐಐಟಿ, ಎನ್‌ಐಟಿ, ಪ್ರತಿಷ್ಠಿತ ಎಐಐಎಂಎಸ್‌ಗೆ ಇಬ್ಬರೂ, ಜೆಐಪಿಎಂಇಆರ್‌ಗೆ ಒಬ್ಬ ವಿದ್ಯಾರ್ಥಿ ವೈದ್ಯಕೀಯಕ್ಕೆ ಆಯ್ಕೆಯಾಗಿದ್ದನ್ನು ಇದೇ ವೇಳೆ ಸ್ಮರಿಸಿದರು.

ಈ ಬಾರಿ ಕಳೆದ ಬಾರಿಗಿಂತಲೂ ಅತ್ಯುತ್ತಮಫಲಿತಾಂಶ ದೊರೆತಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಐಐಟಿಗೆ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ. ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಾಫಲ್ಯತೆ ಕಂಡಿದ್ದೇವೆ ಎಂದು ಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.

ಸಂಸ್ಥೆಯ ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್.ಅಮೋಘ್ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ, ಪ್ರಾಚಾರ್ಯ ಗಂಗಾಧರ್, ಉಪಪ್ರಾಚಾರ್ಯ ಬಿ.ಮನೋಹರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net