ಜೆಇಇ ಮೈನ್ಸ್‌ನಲ್ಲಿ ಎಚ್‌ಕೆಎಸ್ ವಿದ್ಯಾರ್ಥಿಗಳ ಸಾಧನೆ

Exam
Published on

ಹಾಸನ : ಐಐಟಿ, ಎನ್‌ಐಟಿ, ಜಿಎಫ್‌ಟಿಐ ಮೊದಲಾದ ಪ್ರತಿಷ್ಠಿತ ಕಾಲೇಜುಗಳ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರಮಟ್ಟದ ಜೆಇಇ ಪರೀಕ್ಷೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳದ ಶೈಕ್ಷಣಿಕ ಸಹಭಾಗಿತ್ವದ ಎಚ್‌ಕೆಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕ್ರಿಯೇಟಿವ್ ಲರ್ನಿಂಗ್ ತರಬೇತಿ ಪಡೆದು ಪ್ರಥಮ ಪ್ರಯತ್ನದಲ್ಲೇ ತೇರ್ಗಡೆ ಹೊಂದಿದ್ದಾರೆ.

ಜಿ. ಚಮನ್ 4342 ರ‌್ಯಾಂಕ್ ಪಡೆದುಕೊಂಡಿರುವುದು ಗಮನಾರ್ಹ ಸಾಧನೆಯಾಗಿದೆ. ಉಳಿದಂತೆ ಪ್ರಣವ್ ಪಿ. ಸಂಜೀ 96.27 ಪರ್ಸೆಂಟೈಲ್, ಎಂ.ಎಸ್. ಆಯುಷ್ 95.39 ಪರ್ಸೆಂಟೈಲ್, ಎಚ್.ಎಂ. ಚಂದನ 95.25 ಪರ್ಸೆಂಟೈಲ್, ಎಂ.ಬಿ. ಪ್ರಮೋದ್ 94.69 ಪರ್ಸೆಂಟೈಲ್, ಡಿ. ಕುಶಾಲ್ 94.44 ಪರ್ಸೆಂಟೈಲ್, ಪಡೆದುಕೊಳ್ಳುವ ಮೂಲಕ ಅತ್ಯುತ್ತಮ ಅಂಕಗಳೊಂದಿಗೆ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಸೆಕೆಂಡ್ ಫೇಸ್ ಪರೀಕ್ಷೆಯಲ್ಲಿ ಒಟ್ಟು 10 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದು ವಿಶೇಷ ಸಾಧನೆಯಾಗಿದೆ. ಕಳೆದ ವರ್ಷದ ಪರೀಕ್ಷೆಯಲ್ಲಿ ಕುಮಾರಿ ಅನ್ವಿನ್ ಬಿ.ಪಿ. ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿ ಪ್ರಸ್ತುತ ದೇಶದ ಅತ್ಯುನ್ನತ ವಿದ್ಯಾಸಂಸ್ಥೆ ಐಐಟಿ ಬಾಂಬೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.

ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಚ್.ಕೆ.ಸುರೇಶ್, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಜೆಇಇ ಸಂಯೋಜಕ ಅಭಿಷೇಕ್ ಕುಮಾರ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net