

ಹಾಸನ: ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಪಡೆಯಲು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆಇಇ (ಮೇನ್ಸ್ಸ್) 2025 ಅರ್ಹತಾ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಹಾಸನದ ಎಪಿಜೆ ಪದವಿ ಪೂರ್ವ ಕಾಲೇಜಿನ 19 ವಿದ್ಯಾರ್ಥಿಗಳು ಜೆಇಇ (ಅಡ್ವಾನ್ಸ್ಡ್) ಪರೀಕ್ಷೆ ಬರೆಯಲು ಅರ್ಹತೆಯನ್ನು ಪಡೆದುಕೊಂಡಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ.
ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಮನಾರ್ಹ ಪಸೆರ್ಂಟೈಲ್ ಅಂಕಗಳನ್ನು ಗಳಿಸಿದ್ದಾರೆ. ಮೊಹಮ್ಮದ್ ಯೂಸುಫ್ 99.3087 ಪಸೆರ್ಂಟೈಲ್ ಗಳಿಸುವ ಮೂಲಕ ಅಖಿಲ ಭಾರತ 2434 ಕೆಟಗರಿ ರ‌್ಯಾಂಕ್ ಪಡೆದರೆ , ಪ್ರಜ್ವಲ್ ವಿ ಜೋಯಿಸ್ 99.2750 ಪಸೆರ್ಂಟೈಲ್, ಕೆ.ಆರ್.ಪವನ್ 98.6378 ಪಸೆರ್ಂಟೈಲ್, ಮೋಹಿತ್ ಎಂ ನಾಯಕ್ 98.4921 ಪಸೆರ್ಂಟೈಲ್ ಗಳಿಸುವ ಮೂಲಕ ಅಖಿಲ ಭಾರತ 584 ಕೆಟಗರಿ ರ‌್ಯಾಂಕ್, ಎಂ.ಎನ್ .ಪ್ರಶಾಂತ್ ಕುಮಾರ್ 98.2413 ಪಸೆರ್ಂಟೈಲ್, ಎಚ್.ಎಸ್. ತನ್ಮಯಿ 97.9436 ಪಸೆರ್ಂಟೈಲ್ ಗಳಿಸುವ ಮೂಲಕ ಅಖಿಲ ಭಾರತ 185 ಕೆಟಗರಿ ರ‌್ಯಾಂಕ್ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಭೋದಕ ಮತ್ತು ಭೋದಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.