ಜೆ.ಎನ್. ಪಾಲಿಟೆಕ್ನಿಕ್‍ನಲ್ಲಿ ಶಿಕ್ಷಕರ ದಿನಾಚರಣೆ

Thanakushnoor
Published on

ಬೀದರ್: ಕಮಲನಗರ ತಾಲ್ಲೂಕಿನ ಠಾಣಾಕುಶನೂರದ ವಿವೇಕಾನಂದ ಶಿಕ್ಷಣ ಸಂಸ್ಥೆ ಸಂಚಾಲಿತ ಜೆ.ಎನ್. ಪಾಲಿಟೆಕ್ನಿಕ್‍ನಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು.
ಶಿಕ್ಷಣ ತಜ್ಞರಾಗಿದ್ದ ದೇಶದ ಮಾಜಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಪ್ರಾಚಾರ್ಯ ರಾಜಶೇಖರ ಪಾಟೀಲ ಹೇಳಿದರು.
ಉಪ ಪ್ರಾಚಾರ್ಯ ದಿಲೀಪ್ ರಾಂಪುರೆ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಎನ್.ಆರ್. ಮಹಾಜನ್, ಸಂಜಯ್ ಭೋಸ್ಲೆ, ರಾಜಶೇಖರ ಮುದ್ದಾ, ಅಂತೇಶ್ವರ ವಡ್ಲೆ, ಸಂಗಮೇಶ ಆಣದೂರೆ, ಉಪನ್ಯಾಸಕರಾದ ಮನೋಹರ ಪಾಟೀಲ, ಅಹಮ್ಮದ್ ಮುಜೀಬೊದ್ದಿನ್, ಸಚಿನ್, ಸುನೀಲ್ ಮಡಿವಾಳ, ಕುಪೇಂದ್ರ ಮೇತ್ರೆ, ರಾಠೋಡ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net