

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 18ನೇ ವಾರ್ಷಿಕ ಘಟಿಕೋತ್ಸವವನ್ನು ಜೂನ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ.
2018-19ನೇ ಸಾಲಿನಲ್ಲಿ ಪ್ರವೇಶಾತಿ ಪಡೆದು ಸೆಪ್ಟೆಂಬರ್, ಅಕ್ಟೋಬರ್-2022ರವರೆಗೆ ಉತ್ತೀರ್ಣಗೊಂಡಿರುವ ಎಂಎಸ್ಸಿ ಮನೋವಿಜ್ಞಾನದ ವಿದ್ಯಾರ್ಥಿಗಳು, 2019-20ನೇ ಸಾಲಿನಲ್ಲಿ (ಜನವರಿ ಆವೃತ್ತಿ) ಪ್ರವೇಶಾತಿ ಪಡೆದು ಸೆಪ್ಟೆಂಬರ್, ಅಕ್ಟೋಬರ್ 2022ರವರೆಗೆ ಉತ್ತೀರ್ಣರಾಗಿರುವ ಬಿಲಿಬ್‌ಐಎಸ್ಸಿ, ಎಂಲಿಬ್‌ಐಎಸ್ಸಿ, ಬಿಎಡ್, ಎಂಬಿಎ, ಎಂಎಸ್ಸಿ (ಮನೋವಿಜ್ಞಾನ ಹೊರತುಪಡಿಸಿ) ಪದವಿಗಾಗಿ ಅರ್ಜಿ ಸಲ್ಲಿಸಬಹುದು.
2020-21ನೇ ಸಾಲಿನಲ್ಲಿ (ಜುಲೈ ಆವೃತ್ತಿ) ಪ್ರವೇಶಾತಿ ಪಡೆದು ಸೆಪ್ಟೆಂಬರ್, ಅಕ್ಟೋಬರ್-2022ರವರೆಗೆ ಉತ್ತೀರ್ಣರಾಗಿರುವ ಎಲ್ಲ ಎಂಎ, ಎಂ.ಕಾಂ., ಬಿಲಿಬ್‌ಐಎಸ್ಸಿ ಮತ್ತು ಎಂಲಿಬ್‌ಐಎಸ್ಸಿ ವಿದ್ಯಾರ್ಥಿಗಳು, 2020-21ನೇ ಸಾಲಿನಲ್ಲಿ (ಜನವರಿ ಆವೃತ್ತಿ) ಪ್ರವೇಶಾತಿ ಪಡೆದು ಸೆಪ್ಟೆಂಬರ್, ಅಕ್ಟೋಬರ್ 2022ರ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡಿರುವ ಬಿಲಿಬ್‌ಐಎಸ್ಸಿ, ಎಂಲಿಬ್‌ಐಎಸ್ಸಿ ಕಾರ್ಯಕ್ರಮಗಳ ವಿದ್ಯಾರ್ಥಿಗಳು ಪದವಿ ಪಡೆಯಬಹುದು.
ಪದಕ ಮತ್ತು ನಗದು ಬಹುಮಾನಕ್ಕೆ ಅರ್ಹರಾದ ಸ್ನಾತಕ ಮತ್ತು ಸ್ನಾತಕೋತ್ತರ ಕಾರ್ಯಕ್ರಮದ ಅಭ್ಯರ್ಥಿಗಳು, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವ ಸ್ನಾತಕೋತ್ತರ ಅಭ್ಯರ್ಥಿಗಳು, ಪಿಎಚ್‌ಡಿ ಪದವೀಧರರು ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್‌ಲೈನ್ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಆನ್‌ಲೈನ್ ಮುಖಾಂತರವೇ ಸಲ್ಲಿಸಿ ಪದವಿ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಡಿಡಿಡಿ.ಟ್ಠಞಠ್ಠ್ಟ್ಠ.ಚ್ಚ.ಜ್ಞಿ ಅಧಿಕೃತ ಜಾಲತಾಣದಲ್ಲಿ ಅರ್ಜಿಯನ್ನು ಪಡೆಯಬಹುದು. ಆನ್‌ಲೈನ್ ಅರ್ಜಿಯಲ್ಲಿ ಕೋರಿರುವ ಎಲ್ಲ ಮಾಹಿತಿಗಳನ್ನು ಕಡ್ಡಾಯವಾಗಿ ಭರ್ತಿ ಮಾಡಿ, ಶುಲ್ಕ ಪಾವತಿಸಬೇಕು.
ಅನುಪಸ್ಥಿತಿಯಲ್ಲಿ ಪದವಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮತ್ತು ಘಟಿಕೋತ್ಸವದಲ್ಲಿ ಭಾಗವಹಿಸಲು ಸಾಧ್ಯವಾಗದಂತಹ ಅಭ್ಯರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ಘಟಿಕೋತ್ಸವ ನಡೆದ ನಂತರ ತ್ವರಿತ ಅಂಚೆ ಮೂಲಕ ಕಳುಹಿಸಿಕೊಡಲಾಗುವುದು. ಯಾವುದೇ ವಿದ್ಯಾರ್ಥಿಯ ಅಂತಿಮ ವರ್ಷದ ಅಂಕಪಟ್ಟಿಯಲ್ಲಿ ದರ್ಜೆ ಘೋಷಣೆಯಾಗದಿದ್ದಲ್ಲಿ ಅಥವಾ ಇನ್ಯಾವುದೇ ತಿದ್ದುಪಡಿಗಳಿದ್ದಲ್ಲಿ, ತಿದ್ದುಪಡಿಗಾಗಿ ತಮ್ಮ ಮೂಲ ಅಂಕಪಟ್ಟಿಯನ್ನು ಕುಲಸಚಿವರಿಗೆ ಜೂ. 5ರೊಳಗೆ ಮನವಿ ಸಲ್ಲಿಸಬೇಕಿದೆ.
ಶುಲ್ಕದ ವಿವರ: ಪದಕ ಮತ್ತು ನಗದು ಬಹುಮಾನ ಪುರಸ್ಕೃತರು, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವ ಸ್ನಾತಕೋತ್ತರ, ಪಿಎಚ್‌ಡಿ ವಿದ್ಯಾರ್ಥಿಗಳು 1200 ರೂ., ಎಲ್ಲ ಸ್ನಾತಕ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳು 1500 ರೂ.ಗಳನ್ನು ದಂಡ ಶುಲ್ಕವಿಲ್ಲದೇ ಜೂ. 9ರವರೆಗೆ ಸಲ್ಲಿಸಬಹುದಾಗಿದೆ. 100 ರೂ. ದಂಡ ಶುಲ್ಕದೊಂದಿಗೆ ಜೂ.15ರವರೆಗೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.