ಜೂಜುಕೋರರ ಬಂಧನ

GAMBLING
Published on

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ಆರು ಜೂಜುಕೋರರನ್ನು ಪೊಲೀಸರು ಗುರುವಾರ ಬಂಧಿಸಿ, ಅವರಿಂದ 2.02 ಲಕ್ಷ ರೂ. ನಗದು, 3.70 ಲಕ್ಷ ರೂ. ಮೌಲ್ಯದ 4 ಬೈಕ್, 1.21 ಲಕ್ಷ ರೂ. ಮೌಲ್ಯದ 7 ಮೊಬೈಲ್ ಪೋನ್‌ಗಳು ಹಾಗೂ 9 ಲಕ್ಷ ರೂ.ಮೌಲ್ಯದ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

ದಾಳಿ ವೇಳೆ ಒಬ್ಬ ಜೂಜುಕೋರ ಪರಾರಿಯಾಗಿದ್ದಾನೆ. ಚಿಕ್ಕಜಾಜೂರಿನ ಮಂಜಣ್ಣ ಅಲಿಯಾಸ್ ಜಾಕಿ ಮಂಜ ಎಂಬಾತ ಕಾನೂನು ಬಾ ಹಿರವಾಗಿ ಅಂಧರ್‌ಬಾಹರ್ ಆಡಿಸುತ್ತಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ಹೊಳಲ್ಕೆರೆ ಸಿಪಿಐ ಎಂ.ಬಿ. ಚಿಕ್ಕಣ್ಣನವರ್, ಪಿಎಸ್‌ಐ ಸಚಿನ್ ಪಟೇಲ್ ಮತ್ತವರ ಸಿಬ್ಬಂದಿ ದಾಳಿ ನಡೆಸಿದ್ದರು. ಪೊಲೀಸರ ಈ ಕ್ರಮವನ್ನು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net