ಜೂಜು ಅಡ್ಡೆ ಮೇಲೆ ದಾಳಿ; ಹಣ ಎಣಿಕೆ ಯಂತ್ರ ವಶ

gamble1609690830
Published on

ಮೈಸೂರು: ಜೂಜಾಟದ ಎರಡು ಅಡ್ಡೆಗಳ ಮೇಲೆ ಪ್ರತ್ಯೇಕವಾಗಿ ಸಿಸಿಬಿ ಪೊಲೀಸರು ದಾಳಿ ನಡೆಸಿ 44 ಜನರನ್ನು ಬಂಧಿಸಿದ್ದಾರೆ.


ಖಚಿತ ಮಾಹಿತಿ ಮೇರೆಗೆ ಹುಣಸೂರು ರಸ್ತೆಯ ಆದಿತ್ಯಾ ಬಡಾವಣೆಯ ಆಟೋಗ್ಯಾರೇಜ್ ಹಿಂಭಾಗದಲ್ಲಿರುವ ಕೊಠಡಿಯಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. 32 ಜನರನ್ನು ವಶಕ್ಕೆ ಪಡೆದು, ಪಣವಾಗಿಟ್ಟಿದ್ದ 17.24 ಲಕ್ಷ ರೂ. ಮತ್ತು ಹಣ ಎಣಿಕೆ ಯಂತ್ರವನ್ನೂ ಜಪ್ತಿ ಮಾಡಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮತ್ತೊಂದು ಪ್ರಕರಣದಲ್ಲಿ ಚಾಮರಾಜ ಮೊಹಲ್ಲಾದ ಜೆಎಲ್‌ಬಿ ರಸ್ತೆಯ ಹೋಟೆಲ್ ಕೊಠಡಿಯೊಂದರಲ್ಲಿ ಜೂಜಾಡುತ್ತಿದ್ದ 12 ಜನರನ್ನು ವಶಕ್ಕೆ ಪಡೆದಿದ್ದು, ಅವರಿಂದ 2.03 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net