ತಿಪಟೂರು: ಕಟ್ಟುನಿಟ್ಟಿನ ಸೂಚನೆ ಹೊರತಾಗಿಯೂ ನಗರದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಾಗಿದೆ. ನಗರ ಸೇರಿ ತಾಲೂಕು ವ್ಯಾಪ್ತಿಯಲ್ಲಿ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹಣ ಪಣಕ್ಕಿಟ್ಟು ಇಸ್ಪೀಟ್ ಆಡಿದರೆ ಕ್ರಮ ವಹಿಸುವ ಬಗ್ಗೆ ಪೊಲೀಸ್ ಇಲಾಖೆ ಸಾರ್ವಜನಿಕ ಪ್ರಕಟಣೆ ಹೊರಡಿಸಿ. ಮೈಕ್ ಮೂಲಕ ವ್ಯಾಪಕ ಪ್ರಚಾರ ಮಾಡಿದ್ದರು. ಆದರೂ ಭಾನುವಾರ ರಾತ್ರಿ ನಗರದಲ್ಲಿ ಹಣ ಪಣಕ್ಕಿಟ್ಟು ಜೂಜಾಟದಲ್ಲಿ ತೊಡಗಿರುವ ಬಗ್ಗೆ ಪೊಲೀಸ್ ಉಪ ಅಧೀಕ್ಷಕರಿಗೆ ಬಂದ ಖಚಿತ ಮಾಹಿತಿ ಆಧಾರಿದಿ ದಾಳಿ ನಡೆಸಿದ ನಗರಠಾಣೆ ಪೊಲೀಸರು, 10ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕೊರಟಗೆರೆ : ಕೋಳಾಲ ಠಾಣೆ ವ್ಯಾಪ್ತಿಯ ದೊಡ್ಡಪಾಲನಹಳ್ಳಿ, ಸಂಕೇನಹಳ್ಳಿ, ನರಸಯ್ಯನ ಪಾಳ್ಯದಲ್ಲಿ ಅಂದರ್ ಬಾಹರ್ ಅಡ್ಡೆಗಳ ಮೇಲೆ ದಾಳಿ ನಡೆಸಿ ಸುಮಾರು 25ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿವೆ. ದೊಡ್ಡಪಾಲನಹಳ್ಳಿಯಲ್ಲಿ 8 ಆರೋಪಿಗಳಿಂದ 6 ಸಾವಿರ, ಸಂಕೇನಹಳ್ಳಿಯಲ್ಲಿ 6 ಆರೋಪಿಗಳಿಂದ 7 ಸಾವಿರ, ನರಸಾಪುರದಲ್ಲಿ 10 ಆರೋಪಿಗಳಿಂದ 1,12,000 ಸಾವಿರ ವಶಪಡಿಸಿಕೊಳ್ಳಲಾಗಿದೆ. ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಅನಿಲ್, ಸಬ್ ಇನ್ಸ್ಪೆಕ್ಟರ್ಗಳಾದ ರೇಣುಕಾ ಯಾದವ್, ಯೋಗೇಶ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಕೊರಟಗೆರೆ ತಾಲೂಕಿನ ನಾಲ್ಕು ವಿವಿಧ ಸ್ಥಳಗಳಲ್ಲಿ ಜೂಜಾಟದ ಅಡ್ಡೆಗಳ ಮೇಲೆ ಸಬ್ ಇನ್ಸ್ಪೆಕ್ಟರ್ ಚೇತನ್ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಚೀಲಗನಹಳ್ಳಿಯಲ್ಲಿ 8 ಮಂದಿ ಬಂಧಿಸಿ 6,640 ರೂ., ಕೊಡ್ಲಾಹಳ್ಳಿಯಲ್ಲಿ 6 ಮಂದಿಯಿಂದ 5,820 ರೂ., ಸಿದ್ದಲಿಂಗಯ್ಯನ ಪಾಳ್ಯದಲ್ಲಿ 11 ಜನರಿಂದ 10,870 ರೂ. ಮತ್ತು ಧಮಗಲಯ್ಯನ ಪಾಳ್ಯದಲ್ಲಿ 12 ಆರೋಪಿಗಳಿಂದ 15,510 ರೂ. ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ದೊಡ್ಡಲಿಂಗಯ್ಯ, ಪ್ರದಿಪ್, ಮೋಹನ್, ರವಿ, ದಯಾನಂಸ್, ಮಲ್ಲೆಶ್ ಭಾಗವಹಿಸಿದ್ದರು.